ಎರಡನೇ ಟೆಸ್ಟ್: ಭಾರತ 242 ರನ್‌ಗೆ ಆಲೌಟ್, ಜಮೀಸನ್‌ಗೆ ಐದು ವಿಕೆಟ್

Update: 2020-02-29 05:47 GMT

 ಕ್ರೈಸ್ಟ್‌ಚರ್ಚ್, ಫೆ.29: ಯುವ ವೇಗದ ಬೌಲರ್ ಜಮೀಸನ್ ನೇತೃತ್ವದಲ್ಲಿ ಮತ್ತೊಮ್ಮೆ ಶಿಸ್ತುಬದ್ಧ ಬೌಲಿಂಗ್ ದಾಳಿ ಸಂಘಟಿಸಿದ ನ್ಯೂಝಿಲ್ಯಾಂಡ್ ತಂಡ ಭಾರತವನ್ನು ದ್ವಿತೀಯ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 242 ರನ್‌ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ನ್ಯೂಝಿಲ್ಯಾಂಡ್ ತಂಡ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.

ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾ ಹಾಗೂ ಮಾಯಾಂಕ್ ಅಗರ್ವಾಲ್ ಮೊದಲ ವಿಕೆಟ್‌ಗೆ 30 ರನ್ ಸೇರಿಸುವಷ್ಟರಲ್ಲಿ ಬೇರ್ಪಟ್ಟರು. ಅಗರ್ವಾಲ್ ಕೇವಲ 7 ರನ್ ಗಳಿಸಿ ಕಳಪೆ ಪ್ರದರ್ಶನ ಮುಂದುವರಿಸಿದರು. ಗಾಯದ ಭೀತಿಯಿಂದ ಹೊರ ಬಂದ ಶಾ 64 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 54 ರನ್ ಗಳಿಸಿ ಗಮನ ಸೆಳೆದರು. ಇನ್ನುಳಿದಂತೆ ಚೇತೇಶ್ವರ ಪೂಜಾರ 54 ಹಾಗೂ ಹನುಮ ವಿಹಾರಿ 55 ರನ್ ಕೊಡುಗೆ ನೀಡಿದರು.

ನಾಯಕ ವಿರಾಟ್ ಕೊಹ್ಲಿ(3), ಉಪ ನಾಯಕ ಅಜಿಂಕ್ಯ ರಹಾನೆ(7) ಹಾಗೂ ರಿಷಭ್ ಪಂತ್(12) ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಕಿವೀಸ್‌ನ ಪರವಾಗಿ ಜಮೀಸನ್ 45 ರನ್‌ಗೆ ಐದು ವಿಕೆಟ್ ಗೊಂಚಲು ಪಡೆದರು. ಟಿಮ್ ಸೌಥಿ(2-38) ಹಾಗೂ ಟ್ರೆಂಟ್ ಬೌಲ್ಟ್(2-89)ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News