ಅಮೆರಿಕದಲ್ಲಿ 4ನೇ ಕೊರೋನವೈರಸ್ ಸೋಂಕು ಪ್ರಕರಣ ಪತ್ತೆ

Update: 2020-02-29 16:45 GMT

ಲಾಸ್ ಏಂಜಲಿಸ್, ಫೆ. 29: ಅಮೆರಿಕದಲ್ಲಿ ನಾಲ್ಕನೇ ನೂತನ-ಕೊರೋನವೈರಸ್ ಸೋಂಕು ಪ್ರಕರಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ವರದಿ ಮಾಡಿದ್ದಾರೆ. ದೇಶದಲ್ಲಿ ಮಾರಕ ಸೋಂಕು ಹರಡುತ್ತಿದೆ ಎಂಬ ಸೂಚನೆಯನ್ನು ಇದು ನೀಡಿದೆ.

ವಾಶಿಂಗ್ಟನ್ ನ 18 ವರ್ಷಕ್ಕಿಂತ ಕೆಳಗಿನ ಹುಡುಗನಲ್ಲಿ ರೋಗವಿರುವುದು ಪತ್ತೆಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಹೆಚ್ಚಿನ ವಿವರಗಳನ್ನು ಅವರು ನೀಡಿಲ್ಲ.

ಹೊಸ ರೋಗಿಯನ್ನು ಪ್ರಸಕ್ತ ಸ್ನೋಹೊಮಿಶ್ ಕೌಂಟಿಯಲ್ಲಿರುವ ಆತನ ಮನೆಯಲ್ಲೇ ಪ್ರತ್ಯೇಕವಾಗಿರಿಸಲಾಗಿದೆ. ಅವರು ಹೋಗುತ್ತಿರುವ ಹೈಸ್ಕೂಲನ್ನು ಮಾರ್ಚ್ 3ರವರೆಗೆ ಮುಚ್ಚಲಾಗಿದೆ. ಈ ಅವಧಿಯಲ್ಲಿ ಶಾಲೆಯನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಲಾಗುವುದು ಎಂದು ವಾಶಿಂಗ್ಟನ್ ರಾಜ್ಯದ ಆರೋಗ್ಯ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News