ಸಾಮಾಜಿಕ ಜಾಲತಾಣದಿಂದ ಮೋದಿ ಹೊರಬರಲಿದ್ದಾರೆಯೇ?: ಗೊಂದಲಕ್ಕೆ ತೆರೆಎಳೆದ ಪ್ರಧಾನಿ ಹೇಳಿದ್ದು ಹೀಗೆ...

Update: 2020-03-03 09:34 GMT

ಹೊಸದಿಲ್ಲಿ: ತಾನು ಸದ್ಯದಲ್ಲಿಯೇ ಸಾಮಾಜಿಕ ಜಾಲತಾಣಗಳಿಂದ ದೂರವುಳಿಯುವ ಸುಳಿವನ್ನು ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಕೊನೆಗೂ ಮಂಗಳವಾರ ತನ್ನ ನಿರ್ಧಾರದ ಕುರಿತಾದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

"ಈ ಮಹಿಳಾ ದಿನಾಚರಣೆಯಂದು ನಾನು ನನ್ನ ಸಾಮಾಜಿಕ ಜಾಲತಾಣ ಖಾತೆಗಳನ್ನು ತಮ್ಮ ಜೀವನ ಹಾಗೂ ಸಾಧನೆಗಳಿಂದ ನಮಗೆ ಸ್ಫೂರ್ತಿ ನೀಡುವ ಮಹಿಳೆಯರಿಗೆ ಬಿಟ್ಟು ಕೊಡುತ್ತೇನೆ'' ಎಂದು ಪ್ರಧಾನಿ ಇಂದು ಟ್ವೀಟ್ ಮಾಡಿದ್ದಾರೆ.

"ನೀವು ಅಂತಹ ಮಹಿಳೆಯೇ ಅಥವಾ ನಿಮಗೆ ಅಂತಹ ಸ್ಫೂರ್ತಿದಾಯಕ ಮಹಿಳೆಯ ಬಗ್ಗೆ ತಿಳಿದಿದೆಯೇ?, ಇಂತಹ ಕಥೆಗಳನ್ನು #SheInspiresUs ಬಳಸಿ ಶೇರ್ ಮಾಡಿ, ನರೇಂದ್ರ ಮೋದಿಯವರ ಸೋಶಿಯಲ್ ಮೀಡಿಯಾ ಖಾತೆಗಳನ್ನು ಒಂದು ದಿನ ಪಡೆಯಲು ನಿಮಗೊಂದು ಅವಕಾಶ'' ಎಂದು ಪ್ರಧಾನಿ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಸೋಮವಾರ ಟ್ವೀಟ್ ಮಾಡಿದ್ದ ಮೋದಿ, "ಈ ರವಿವಾರ ನನ್ನ ಫೇಸ್‍ಬುಕ್, ಟ್ವಿಟರ್, ಇನ್‍ ಸ್ಟಾಗ್ರಾಂ ಮತ್ತು ಯುಟ್ಯೂಬ್ ಖಾತೆಗಳನ್ನು ಕೈಬಿಡುವ ಬಗ್ಗೆ ಯೋಚಿಸುತ್ತಿದ್ದೇನೆ, ನಿಮಗೆಲ್ಲಾ ಮಾಹಿತಿ ನೀಡುತ್ತೇನೆ'' ಎಂದು ಬರೆದಿದ್ದರು.

ಇದು ಸಾಕಷ್ಟು ಕುತೂಹಲ ಹಾಗೂ ಅಚ್ಚರಿಗೆ ಕಾರಣವಾಗಿ #ನೋಸರ್ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News