ಮುಖವನ್ನು ಮುಟ್ಟದೆ ವಾರಗಳಾದವು!

Update: 2020-03-05 16:00 GMT

ವಾಶಿಂಗ್ಟನ್, ಮಾ. 5: ಕೊರೋನವೈರಸ್ ನಿಗ್ರಹ ಕ್ರಮಗಳಿಂದಾಗಿ ನಾನೀಗ ಏನನ್ನೂ ಮುಟ್ಟುತ್ತಿಲ್ಲ, ಅಷ್ಟೇ ಏಕೆ ನನ್ನ ಸ್ವಂತ ಮುಖವನ್ನೂ ಮುಟ್ಟುತ್ತಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಬುಧವಾರ ಶ್ವೇತಭವನದಲ್ಲಿ ನಡೆದ ವಿಮಾನಯಾನ ಸಂಸ್ಥೆಯ ಮುಖ್ಯಾಧಿಕಾರಿಗಳ ಸಭೆಯಲ್ಲಿ, ಮಾರಕ ರೋಗವು ಹರಡುವುದನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳು ವಿವರಿಸುತ್ತಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ವೇತಭವನದ ಕೊರೋನವೈರಸ್ ಸಮನ್ವಯಾಧಿಕಾರಿ ಡೆಬೋರಾ ಬ್ರಿಕ್ಸ್, ‘‘ನೀವು ನಿಮ್ಮ ಕೈಗಳನ್ನು ತೊಳೆದುಕೊಳ್ಳುತ್ತಾ ಇರಬೇಕು, ಆದರೆ, ಮುಖವನ್ನು ಮುಟ್ಟಬಾರದು’’ ಎಂದರು.

ಇದಕ್ಕೆ ಲಘುವಾಗಿ ಪ್ರತಿಕ್ರಿಯಿಸಿದ ಟ್ರಂಪ್, ‘‘ಹೌದು, ನೀವು ಹೇಳುವುದು ಸರಿ. ಹಲವು ವಾರಗಳಿಂದ ನಾನು ನನ್ನ ಮುಖವನ್ನು ಸ್ಪರ್ಶಿಸಿಯೇ ಇಲ್ಲ...! ನನಗೀಗ ಮುಖವನ್ನು ಎಣಿಸುತ್ತಿದೆ!!’’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News