×
Ad

ಅಮೆರಿಕ: ಮೃತರ ಸಂಖ್ಯೆ 11ಕ್ಕೆ: ಕ್ಯಾಲಿಫೋರ್ನಿಯದಲ್ಲಿ ತುರ್ತು ಪರಿಸ್ಥಿತಿ

Update: 2020-03-05 21:46 IST

ನ್ಯೂಯಾರ್ಕ್, ಮಾ. 5: ಕೊರೋನವೈರಸ್‌ನಿಂದಾಗಿ ಅಮೆರಿಕದಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 11ಕ್ಕೇರಿದೆ. ಅದೇ ವೇಳೆ, ಕ್ಯಾಲಿಫೋರ್ನಿಯದಲ್ಲಿ ಮೊದಲ ಕೊರೋನವೈರಸ್ ಸಾವು ಸಂಭವಿಸಿದೆ.

ಇದು ವಾಶಿಂಗ್ಟನ್ ರಾಜ್ಯದ ಹೊರಗಡೆ ಸಂಭವಿಸಿದ ಮೊದಲ ಕೊರೋನವೈರಸ್ ಸಾವಾಗಿದೆ. ವಾಶಿಂಗ್ಟನ್ ರಾಜ್ಯದಲ್ಲಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಕ್ಯಾಲಿಫೋರ್ನಿಯದಲ್ಲಿ ಮೊದಲ ಸಾವು ಸಂಭವಿಸಿದಂತೆಯೇ, ರಾಜ್ಯದ ಗವರ್ನರ್ ಗ್ಯಾವಿನ್ ನ್ಯೂಸಾಮ್ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ರಾಜ್ಯಾದ್ಯಂತ 53 ಸೋಂಕು ಪ್ರಕರಣಗಳು ವರದಿಯಾಗಿವೆ.

‘‘ಕೊರೋನವೈರಸ್ ಸೋಂಕು ಪ್ರಕರಣಗಳನ್ನು ಪತ್ತೆಹಚ್ಚಲು ಹಾಗೂ ಹರಡುವಿಕೆಯನ್ನು ನಿಧಾನಿಸುವ ನಿಟ್ಟಿನಲ್ಲಿ ಸಹಾಯ ಮಾಡಲು ಕ್ಯಾಲಿಫೋರ್ನಿಯ ಸರಕಾರದ ಎಲ್ಲ ವಿಭಾಗಗಳನ್ನೂ ನಿಯೋಜಿಸಲಾಗಿದೆ’’ ಎಂದು ಹೇಳಿಕೆಯೊಂದರಲ್ಲಿ ನ್ಯೂಸಾಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News