ಇಟಲಿ: ಸಾವಿನ ಸಂಖ್ಯೆ 107ಕ್ಕೆ
Update: 2020-03-05 22:11 IST
ರೋಮ್ (ಇಟಲಿ), ಮಾ. 5: ವೇಗವಾಗಿ ಹರಡುತ್ತಿರುವ ಕೊರೋನವೈರಸನ್ನು ನಿಯಂತ್ರಿಸುವ ಕ್ರಮವಾಗಿ, ಯುರೋಪ್‌ನ ಕೊರೋನವೈರಸ್ ಕೇಂದ್ರಬಿಂದು ಇಟಲಿ ಬುಧವಾರ ತನ್ನೆಲ್ಲ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳನ್ನು ಮುಚ್ಚಿದೆ.
ಇಟಲಿಯಲ್ಲಿ ಬುಧವಾರ ಹೊಸದಾಗಿ 28 ಸಾವುಗಳು ಸಂಭವಿಸಿದ್ದು, ಕೊರೋನವೈರಸ್‌ನಿಂದಾಗಿ ದೇಶದಲ್ಲಿ ಸಂಭವಿಸಿದ ಸಾವುಗಳ ಒಟ್ಟು ಸಂಖ್ಯೆ 107ಕ್ಕೇರಿದೆ. ಚೀನಾದ ಬಳಿಕ ಇಟಲಿಯಲ್ಲೇ ಅತಿ ಹೆಚ್ಚಿನ ಸಾವುಗಳು ಸಂಭವಿಸಿವೆ.
ಕೈಲುಕುಬೇಡಿ, ಚುಂಬಿಸಬೇಡಿ: ಇಟಲಿ
ಕೊರೋನವೈರಸ್ ಸೋಂಕು ಹರಡುವುದನ್ನು ತಡೆಯಲು, ಜನರನ್ನು ಭೇಟಿಯಾಗುವಾಗ ಅವರ ಕೈಕುಲುಕದಂತೆ ಮತ್ತು ಚುಂಬಿಸದಂತೆ ತನ್ನ ಪ್ರಜೆಗಳಿಗೆ ಇಟಲಿ ಸಲಹೆ ನೀಡಿದೆ. ಅದೇ ವೇಳೆ, ಫುಟ್ಬಾಲ್ ಪಂದ್ಯಗಳನ್ನು ಪ್ರೇಕ್ಷಕರಿಲ್ಲದೇ ಆಡುವಂತೆ ಸರಕಾರ ಸೂಚಿಸಿದೆ.