ಎನ್‌ಪಿಆರ್‌ನಲ್ಲಿ ಹೆತ್ತವರ ಜನನ ಸ್ಥಳ, ದಿನಾಂಕ ಕುರಿತ ಮಾಹಿತಿ ಅಗತ್ಯ ಎಂದ ಸರಕಾರ

Update: 2020-03-06 05:48 GMT

ಹೊಸದಿಲ್ಲಿ, ಮಾ.6: ನ್ಯಾಷನಲ್ ಪಾಪ್ಯುಲೇಶನ್ ರಿಜಿಸ್ಟರ್ ಅಥವಾ ಎನ್‌ಪಿಆರ್ ಫಾರ್ಮ್‌ನಿಂದ ಕೆಲ ವಿವಾದಾತ್ಮಕ ಪ್ರಶ್ನೆಗಳನ್ನು ಸರಕಾರ ತೆಗೆದುಹಾಕಲು ಮನಸ್ಸು ಮಾಡುತ್ತಿಲ್ಲ ಎಂಬುದಕ್ಕೆ ಪುರಾವೆ ಲಭಿಸಿದೆ. ತಂದೆ ತಾಯಿಯ ಜನನ ಸ್ಥಳ ಹಾಗೂ ದಿನಾಂಕದ ಕುರಿತಾದ ಪ್ರಶ್ನೆಗಳನ್ನು ಹಿಂದೆ ಕೂಡ ಕೇಳಲಾಗಿದೆ ಹಾಗೂ ಬ್ಯಾಕ್-ಎಂಡ್ ಡಾಟಾ ಪ್ರೊಸೆಸಿಂಗ್‌ಗೆ ಅಗತ್ಯವಾಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯವು ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದೆ.

ಕಾಂಗ್ರೆಸ್ ಸಂಸದ ಆನಂದ್ ಶರ್ಮ ನೇತೃತ್ವದ ಗೃಹ ವ್ಯವಹಾರಗಳ ಸ್ಥಾಯಿ ಸಮಿತಿ ಗುರುವಾರ ರಾಜ್ಯಸಭೆಯಲ್ಲಿ ತನ್ನ ಅನುದಾನ ಬೇಡಿಕೆಗಳ ವರದಿಯನ್ನು ಮಂಡಿಸಿದೆ. 2020-21 ಎನ್‌ಪಿಆರ್ ಫಾರ್ಮ್ ನಲ್ಲಿ ಹೆತ್ತವರ ಜನನ ಸ್ಥಳ ಹಾಗೂ ದಿನಾಂಕದ ಕುರಿತಾದ ಪ್ರಶ್ನೆಯ ಬಗ್ಗೆ ಸಚಿವಾಲಯವನ್ನು ಕೇಳಿದ್ದಕ್ಕೆ ಸಚಿವಾಲಯ ನೀಡಿದ ಉತ್ತರದಲ್ಲಿ ‘‘2010ರಲ್ಲಿ ನಡೆಸಲಾದ ಎನ್‌ಪಿಆರ್‌ನಲ್ಲಿ ಕೂಡ ಒಂದು ಕುಟುಂಬದಲ್ಲಿದ್ದ ಎಲ್ಲಾ ಹೆತ್ತವರ ಕುರಿತಂತೆ ಈ ಮಾಹಿತಿ ಸಂಗ್ರಹಿಸಲಾಗಿತ್ತು’’ ಎಂದು ತಿಳಿಸಿದೆಯೆಂದು ವರದಿ ಹೇಳಿದೆ.

‘‘ಎನ್‌ಪಿಆರ್ ಪ್ರಕ್ರಿಯೆ ಸಂದರ್ಭ ಹೆತ್ತವರು ಬೇರೆಡೆ ವಾಸಿಸುತ್ತಿದ್ದರೆ ಅಥವಾ ಅದಾಗಲೇ ಮೃತಪಟ್ಟಿದ್ದರೆ ಅಂಥವರ ಹೆಸರುಗಳನ್ನು ಮಾತ್ರ ಸಂಗ್ರಹಿಸಲಾಗಿತ್ತು. ಬ್ಯಾಕ್ ಎಂಡ್ ಡಾಟಾ ಪ್ರೊಸೆಸಿಂಗ್‌ಗೆ ಅನುವಾಗಲು ಎನ್‌ಪಿಆರ್ 2020ರಲ್ಲಿ ಎಲ್ಲಾ ಮಾಹಿತಿ ಸಂಗ್ರಹಿಸಲಾಗುವುದು’’ ಎಂದು ಸಚಿವಾಲಯದ ಉತ್ತರ ತಿಳಿಸಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News