ಫೆಲೆಸ್ತೀನ್: 7 ಸೋಂಕು ಪ್ರಕರಣಗಳು ಪತ್ತೆ
Update: 2020-03-06 23:03 IST
ಫೆಲೆಸ್ತೀನ್, ಮಾ. 6: ಫೆಲೆಸ್ತೀನ್‌ನ ಮೊದಲ ಕೊರೋನವೈರಸ್ ಸೊಂಕುಗಳು ಬೆತ್ಲೆಹೇಮ್ ನಗರದಲ್ಲಿ ಗುರುವಾರ ಪತ್ತೆಯಾಗಿವೆ ಹಾಗೂ ಅದರ ಬೆನ್ನಿಗೇ ಶುಕ್ರವಾರ ನಗರಕ್ಕೆ ಬೀಗಮುದ್ರೆ ಜಡಿಯಲಾಗಿದೆ.
ಗುರುವಾರ ಏಳು ಕೊರೋನವೈರಸ್ ಸೋಂಕು ಪ್ರಕರಣಗಳು ಪತ್ತೆಯಾದ ಬಳಿಕ, ತಡರಾತ್ರಿ ಫೆಲೆಸ್ತೀನ್ ಸರಕಾರ ಒಂದು ತಿಂಗಳ ಅವಧಿಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಯೇಸು ಕ್ರಿಸ್ತನ ಜನ್ಮಸ್ಥಳ ಎಂಬುದಾಗಿ ಕ್ರೈಸ್ತರು ನಂಬುವ ಸ್ಥಳದಲ್ಲಿ ಕಟ್ಟಲಾಗಿರುವ ‘ಚರ್ಚ್ ಆಫ್ ದ ನೇಟಿವಿಟಿ’ಯನ್ನು ಗುರುವಾರ ಮುಚ್ಚಲಾಗಿದೆ.