ದಿಲ್ಲಿಯಲ್ಲಿ ನಡೆದದ್ದು ಘರ್ಷಣೆಯಲ್ಲ, ವ್ಯವಸ್ಥಿತ ಹಿಂಸಾಚಾರ: ಬ್ರಿಟನ್ ಸಂಸದೆ

Update: 2020-03-06 18:03 GMT
Photo: twitter.com/NadiaWhittomeMP/photo

ಲಂಡನ್, ಮಾ. 6: ದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರವನ್ನು ವಿವರಿಸಲು ‘ಘರ್ಷಣೆ’ ಅಥವಾ ‘ಪ್ರತಿಭಟನೆ’ ಪದಗಳು ಸರಿಯಾದುದಲ್ಲ ಎಂದು ಬ್ರಿಟನ್‌ನ ಲೇಬರ್ ಪಕ್ಷದ ಭಾರತ ಮೂಲದ ಸಂಸದೆ ನಾದಿಯಾ ವಿಟೋಮ್ ಹೇಳಿದ್ದಾರೆ.

ಭಾರತದ ಮುಸ್ಲಿಮರು ಮತ್ತು ಇತರ ಹಲವಾರು ಅಲ್ಪಸಂಖ್ಯಾತರ ಮೇಲೆ ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗಿರುವ ಹಿಂದುತ್ವ ಹಿಂಸಾಚಾರದ ಮುಂದುವರಿದ ಭಾಗ ದಿಲ್ಲಿ ಹಿಂಸಾಚಾರವಾಗಿದೆ ಹಾಗೂ ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯ ಬಿಜೆಪಿ ಸರಕಾರದ ಒಪ್ಪಿಗೆಯಿದೆ ಎಂದು ವಿಟೋಮ್ ನುಡಿದರು.

ಅವರು ಇತ್ತೀಚೆಗೆ ಬ್ರಿಟನ್‌ನ ಹೌಸ್ ಆಫ್ ಕಾಮನ್ಸ್‌ನಲ್ಲಿ ದಿಲ್ಲಿ ಹಿಂಸಾಚಾರದ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News