ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ. ಅನ್ಬಳಗನ್ ಇನ್ನಿಲ್ಲ

Update: 2020-03-07 17:39 GMT

ಚೆನ್ನೈ,ಮಾ.7: ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ. ಅನ್ಬಳಗನ್ ಶನಿವಾರ ನಿಧನರಾಗಿದ್ದಾರೆ. ಅವರಿಗೆ 97 ನಿಧನರಾಗಿದ್ದಾರೆ. ಅನ್ಬಳಗನ್ ಅವರು 43 ವರ್ಷಗಳಿಂದ ಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ದೀರ್ಘ ಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅನ್ಬಳಗನ್ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 1977ರಿಂದ ಸತತ 9 ಬಾರಿ ಡಿಎಂಕೆಯ ಪ್ರಧಾನ ಕಾರ್ಯದರ್ಶಿಯಾಗಿ ಅವರು ನೇಮಕಗೊಂಡಿದ್ದರು. 9 ಸಲ ಶಾಸಕರಾಗಿ, ಒಂದು ಅವಧಿಗೆ ಲೋಕಸಭಾ ಸದಸ್ಯರಾಗಿದ್ದರು. ತಮಿಳುನಾಡಿನ ಮಾಜಿ ವಿತ್ತ ಸಚಿವರಾದ ಅನ್ಬಳಗನ್ 2011ರವರೆಗೆ ತಮಿಳುನಾಡು ವಿಧಾನಸಭಾ ಚುನಾವಣೆಗಳಿಗೆ ಅವರು ಸ್ಪರ್ಧಿಸಿದ್ದರು.

   ಪೆರಾಸಿರಿಯಾರ್ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದ ಅನ್ಬಳಗನ್, ಡಿಎಂಕೆಯ ಹಿರಿಯ ನಾಯಕ ದಿವಂಗತ ಕರುಣಾನಿಧಿ ಹಾಗೂ ಪಕ್ಷದ ಸಂಸ್ಥಾಪಕ ಅಣ್ಣಾದೊರೈ ಅವರ ನಿಕಟಸ್ನೇಹಿತರಾಗಿದ್ದರು. 1944ರಿಂದ 1957ರವರೆಗೆ ಕಾಲೇಜು ಉಪನ್ಯಾಕರಾಗಿದ್ದ ಅವರು ಆನಂತ ತಮಿಳುನಾಡು ರಾಜಕೀಯ ಪ್ರವೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News