ಗಣಿಗಾರಿಕೆಗಾಗಿ ಗ್ರಾ.ಪಂ. ಒಪ್ಪಿಗೆ ಪತ್ರ ಫೋರ್ಜರಿ ಆರೋಪ : ಎನ್‌ಸಿಎಲ್‌ಗೆ ಚತ್ತೀಸ್‌ಗಢ ಸರಕಾರ ನೋಟಿಸ್
ಹೊಸದಿಲ್ಲಿ,ಮಾ.7: ದಾಂತೆವಾಡದ ದಕ್ಷಿಣ ಬಸ್ತಾರ್‌ನ ಕಲ್ಲಿದ್ದಲು ಗಣಿಯಲ್ಲಿ ಕಳೆದ ಎರಡು ವರ್ಷಗಳಿಗೂ ಹೆಚ್ಚು ಸಮಯದಿಂದ ಗಣಿಗಾರಿಕೆಯನ್ನು ನಡೆಸದೆ ಇರುವ ಎನ್‌ಸಿಎಲ್ ಕಂಪೆನಿಗೆ ಚತ್ತೀಸ್‌ಗಡ ಸರಕಾರವು ಎನ್‌ಸಿಎಲ್ ಕಂಪೆನಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಕಲ್ಲಿದ್ದಲು ಗಣಿಯಲ್ಲಿ ಗಣಿಗಾರಿಕೆ ನೀಡಲಾದ ಅನುಮತಿಯನ್ನು ಯಾಕೆ ರದ್ದುಪಡಿಸಬಾರದು ಎಂದು ಅದು ಅರ್ಜಿಯಲ್ಲಿ ಪ್ರಶ್ನಿಸಿದೆ.
ಯಾವುದೇ ಗಣಿಗಾರಿಕೆಗೂ ಗ್ರಾಮಪಂಚಾಯತ್ ಅನುಮತಿ ಅಗತ್ಯವಿರುತ್ತದೆ. ಆದರೆ ದಕ್ಷಿಣಬಸ್ತಾರ್‌ನ ಕಬ್ಬಿಣದ ಆದಿರಿನ ಗಣಿಗಾರಿಕೆಗಾಗಿ, ಗ್ರಾಮಪಂಚಾಯತ್‌ನ ಒಪ್ಪಿಗೆ ಪತ್ರ ದೊರೆತಿದೆಯೆಂದು ಫೋರ್ಜರಿ ಮಡಲಾಗಿದೆ. ಹೀಗಾಗಿ ಅಲ್ಲಿ ಗಣಿಗಾರಿಕೆ ಅಸಿಂಧುವಾಗಿದೆಯೆಂದು ಸರಕಾರವು ನೋಟಿಸ್‌ನಲ್ಲಿ ಹೇಳಿದೆ.ಎನ್‌ಸಿಎಲ್, ಸರಕಾರಿ ಸ್ವಾಮ್ಯದ ರಾಷ್ಟ್ರೀಯ ಕಲ್ಲಿದ್ದಲು ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ಹಾಗೂ ಚತ್ತೀಸ್‌ಗಢ ಕಲ್ಲಿದ್ದಲು ಅಭಿವೃದ್ಧಿ ನಿಗಮ (ಸಿಎಂಡಿಸಿ)ದ ಜಂಟಿ ಉದ್ಯಮವಾಗಿದೆ.
ಈ ಗಣಿಯನ್ನು ಎನ್‌ಸಿಎಲ್‌ಗೆ ನೀಡಲಾಗಿದ್ದರೂ, ಚತ್ತೀಸ್‌ಗಡ ಸರಕಾರದ ಈ ಕ್ರಮವು ಆದಾನಿ ಎಂಟರ್‌ಪ್ರೈಸಸ್ ಮೇಲೆಯೂ ಪರಿಣಾಮ ಬೀರಲಿದೆ. ಗಣಿಯ ಡೆವಲಪರ್ ಹಾಗೂ ನಿರ್ವಾಹಕನಾಗಿ ಆದಾನಿ ಎಂಟರ್‌ಪ್ರೈಸಸ್ ಅನ್ನು ನಿಯೋಜಿಸಿತ್ತು.
ಶೋಕಾಸ್ ನೋಟಿಸ್‌ನ ಒಂದು ಪ್ರತಿ ಅದಾನಿ ಎಂಟರ್‌ಪ್ರೈಸಸ್‌ಗೂ ನೀಡುವ ನಿರೀಕ್ಷೆಯಿದೆ. ಆದರೆ ಗ್ರಾಮಪಂಚಾಯತ್‌ನ ಒಪ್ಪಿಗೆ ಪತ್ರವನ್ನು ಫೋರ್ಜರಿ ಮಾಡರುವ ವಿವಾದದಲ್ಲಿ ತನಗೆ ಯಾವ ಸಂಬಂಧವೂ ಇಲ್ಲವೆಂದು ಅದಾನಿ ಗ್ರೂಪ್‌ನ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.