×
Ad

ಸೌರಾಷ್ಟ್ರ ತಂಡಕ್ಕೆ ಪೂಜಾರ ಲಭ್ಯ

Update: 2020-03-07 23:42 IST

ರಾಜ್‌ಕೋಟ್, ಮಾ.7: ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಬಂಗಾಳ ವಿರುದ್ಧ ಸೌರಾಷ್ಟ್ರ ಪರ ರಣಜಿ ಟ್ರೋಫಿ ಫೈನಲ್ ಆಡಲಿದ್ದಾರೆ ಎಂದು ಶನಿವಾರ ದೃಢಪಟ್ಟಿದೆ.

ಫೈನಲ್ ಪಂದ್ಯವು ಬಂಗಾಳ-ಸೌರಾಷ್ಟ್ರದ ನಡುವೆ ಸೋಮವಾರ ಎಸ್‌ಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ. ಇದೇ ಮೊದಲ ಬಾರಿ ಎಸ್‌ಸಿಎ ಸ್ಟೇಡಿಯಂ ಫೈನಲ್ ಪಂದ್ಯ ಆತಿಥ್ಯವಹಿಸಿಕೊಳ್ಳಲಿದೆ.

77 ಟೆಸ್ಟ್ ಪಂದ್ಯಗಳನ್ನಾಡಿರುವ ಪೂಜಾರ ಇತ್ತೀಚೆಗಷ್ಟೇ ನ್ಯೂಝಿಲ್ಯಾಂಡ್ ಪ್ರವಾಸ ಮುಗಿಸಿ ಸ್ವದೇಶಕ್ಕೆ ವಾಪಸಾಗಿದ್ದರು. ಕಿವೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪೂಜಾರ 4 ಇನಿಂಗ್ಸ್‌ಗಳಲ್ಲಿ 100 ರನ್ ಗಳಿಸಿದ್ದರು.

17 ಸದಸ್ಯರುಗಳನ್ನು ಒಳಗೊಂಡ ಸೌರಾಷ್ಟ್ರ ತಂಡವನ್ನು ಸ್ಟಾರ್ ವೇಗದ ಬೌಲರ್ ಜೈದೇವ್ ಉನದ್ಕಟ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಗುಜರಾತ್ ವಿರುದ್ಧ ಸೆಮಿ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿದ ಬಳಿಕ ತಾನು ನ್ಯೂಝಿಲ್ಯಾಂಡ್‌ನಲ್ಲಿದ್ದ ಪೂಜಾರರೊಂದಿಗೆ ಸತತ ಸಂಪರ್ಕದಲ್ಲಿದ್ದೆ ಎಂದು ಉನದ್ಕಟ್ ಬಹಿರಂಗಪಡಿಸಿದ್ದಾರೆ.

► ಸೌರಾಷ್ಟ್ರ ರಣಜಿ ತಂಡ: ಜೈದೇವ್ ಉನದ್ಕಟ್(ನಾಯಕ), ಚೇತೇಶ್ವರ ಪೂಜಾರ, ಶೆಲ್ಡನ್ ಜಾಕ್ಸನ್, ಕಮಲೇಶ್ ಮಕ್ವಾನ, ಅರ್ಪಿತ್ ವಸವಡ, ಚಿರಾಗ್ ಜಾನಿ, ಧರ್ಮೇಂದ್ರ ಸಿನ್ಹಾ ಜಡೇಜ, ಹಾರ್ವಿಕ್ ದೇಸಾಯಿ, ಸ್ನೇಲ್ ಪಟೇಲ್(ವಿಕೆಟ್‌ಕೀಪರ್), ಕಿಶನ್ ಪಾರ್ಮರ್, ಅವಿ ಬಾರೊಟ್(ವಿಕೆಟ್‌ಕೀಪರ್), ಪ್ರೇರಕ್ ಮಂಕಡ್, ಸಮರ್ಥ್ ವ್ಯಾಸ್, ವಿಶ್ವರಾಜ್ ಜಡೇಜ, ಕುಶಾಂಗ್ ಪಟೇಲ್, ಚೇತನ್ ಸಕಾರಿಯ, ಪಾರ್ಥ್ ಭೂಟ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News