ಬಾಂಗ್ಲಾದಲ್ಲಿ 3 ಕೊರೊನಾ ಪ್ರಕರಣ ದೃಢ

Update: 2020-03-08 16:36 GMT
file photo

ಢಾಕಾ,ಮಾ.8: ನೆರೆಯ ರಾಷ್ಟ್ರವಾದ ಬಾಂಗ್ಲಾದಲ್ಲಿ ಇದೇ ಮೊದಲ ಬಾರಿಗೆ ಕೊರೋನ ವೈರಸ್ ಸೋಂಕಿನ ಮೂರು ಪ್ರಕರಣಗಳು ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಸೋಂಕು ಪೀಡಿತರಾಗಿಗಿದ್ದು 20ರಿಂದ 35 ವರ್ಷದೊಳಗಿನವರೆಂದು ಅವರು ಹೇಳಿದ್ದಾರೆ. ಇವರಲ್ಲಿ ಇಬ್ಬರು ತೀರಾ ಇತ್ತೀಚೆಗೆ ಇಟಲಿಯಿಂದ ವಾಪಾಸಾಗಿದ್ದರು. ಸೋಂಕು ಪೀಡಿತ ಮೂರನೆ ವ್ಯಕ್ತಿಯು ಇವರಿಬ್ಬರ ಪೈಕಿ ಒಬ್ಬರ ಬಂಧುವೆಂದು ಬಾಂಗ್ಲಾದೇಶದ ಸಾಂಕ್ರಾಮಿಕ ರೋಗ ನಿಯಂತ್ರಣ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಸಬ್ರಿನಾ ಫ್ಲೋರಾ ತಿಳಿಸಿದ್ದಾರೆ.

 ಯುರೋಪ್ ರಾಷ್ಟ್ರವಾದ ಇಟಲಿಯಲ್ಲಿ 233 ಮಂದಿ ಕೊರೋನ ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಸ್ವದೇಶಕ್ಕೆ ವಾಪಾಸಾಗಿರುವ ಬಾಂಗ್ಲಾಪ್ರಜೆಗಳಿಗೆ ಇಟಲಿಯಲ್ಲಿ ಸೋಂಕು ತಗಲಿರಬೇಕೆಂದು ಸಂಶಯಿಸಲಾಗಿದೆ.

ಮೂವರು ಸೋಂಕುಪೀಡಿತರ ಜೊತೆ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳನ್ನು ಕೂಡಾ ದಿಗ್ಬಂಧನಕ್ಕೊಳಪಡಿಸಲಾಗುವುದೆಂದು ಸಬ್ರಿನಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News