ಚೀನಾದಲ್ಲಿ ಕೊರೋನ ಸಾವಿನ ಸರಣಿ: ಮೃತಪಟ್ಟವರ ಸಂಖ್ಯೆ 3119ಕ್ಕೆ ಏರಿಕೆ
ಬೀಜಿಂಗ್,ಮಾ.9: ಮಾರಣಾಂತಿಕ ಕೊರೋನ ವೈರಸ್‌ನ ಅಟ್ಟಹಾಸ ಚೀನಾದಲ್ಲಿ ಮಂದುವರಿದಿದ್ದು, ರವಿವಾರ 22 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದು ಕಳೆದ ಒಂದು ತಿಂಗಳಿನಲ್ಲಿ ಒಂದೇ ದಿನದಲ್ಲಿ ಸಂಭವಿಸಿದ ಅತ್ಯಂತ ಕಡಿಮೆ ಸಂಖ್ಯೆಯ ಸಾವುಗಳಾಗಿವೆ.ಅಷ್ಟೇ ಅಲ್ಲದೆ ಸೋಮವಾರ ಹೊಸದಾಗಿ 40 ಮಂದಿ ಸೋಂಕು ತಗಲಿದ್ದು, ಇದೊಂದು ದಾಖಲೆಯ ಕುಸಿತವಾಗಿದೆ. ಈವರೆಗೆ ಕೊರೋನ ವೈರಸ್‌ನಿಂದಾಗಿ ಚೀನಾದಲ್ಲಿ ಒಟ್ಟು 3119 ಮಂದಿ ಸಾವನ್ನಪ್ಪಿದ್ದಾರೆ.
ಚೀನಾದಲ್ಲಿ ಕೊರೋನ ಪ್ರಕರಣಗಳ ಸಂಖೆಯಲ್ಲಿ ಗಣನೀಯ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸರಕಾರವು, ಈ ರೋಗದ ಉಗಮಸ್ಥಾನವಾಗಿರುವ ವೂಹಾನ್ ನಗರದಲ್ಲಿ ತೆರೆಯಲಾಗಿದ್ದ 11 ಆಸ್ಪತ್ರೆಗಳನ್ನು ಮುಚ್ಚುಗಡೆಗೊಳಿಸಲಾಗಿದೆ. ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ತಿಳಿಸಿದೆ.
ರವಿವಾರದವರೆಗೆ ಚೀನಾದಲ್ಲಿ ಕೊರೋನಾ ಪೀಡಿತರ ಒಟ್ಟು ಸಂಖ್ಯೆ 80,735ಕ್ಕೆ ತಲುಪಿದ್ದು, ಒಟ್ಟು 3119 ಮಂದಿ ಸಾವಿಗೀಡಾಗಿದ್ದಾರೆ. ಸದ್ಯ 19,016 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, 58,600 ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಎಂದು ಎನ್‌ಎಚ್‌ಸಿ ತಿಳಿಸಿದೆ.
ರವಿವಾ 21 ಮಂದಿ ಹುಬೈ ಪ್ರಾಂತದಲ್ಲಿ ಹಾಗೂ ಓರ್ವ ಗುವಾಂಗ್‌ಡೊಂಗ್ ಪ್ರಾಂತದಲ್ಲಿ ಮೃತಪಟ್ಟಿದ್ದಾರೆ ಮತ್ತು 60 ಮಂದಿಗೆ ಹೊಸದಾಗಿ ಕೊರೋನ ಸೋಂಕು ತಗಲಿರುವುದಾಗಿ ವರದಿಯಾಗಿತ್ತು.