×
Ad

ಕೊರೋನವೈರಸ್‌: ಇರಾನ್ ನಲ್ಲಿ ಒಂದೇ ದಿನ 43 ಮಂದಿ ಬಲಿ

Update: 2020-03-09 23:03 IST

ಟೆಹರಾನ್, ಮಾ.9: ಕೊರೋನ ವೈರಸ್‌ನ ಹಾವಳಿಗೆ ತತ್ತರಿಸಿರುವ ಇರಾನ್‌ನಲ್ಲಿ ಸೋಮವಾರ 43 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ದೇಶದಲ್ಲಿ ವೈರಸ್ ಹಾವಳಿಗೆ ಬಲಿಯಾದವರ ಒಟ್ಟು ಸಂಖ್ಯೆ 237ಕ್ಕೇರಿದೆ.

  ‘‘ಕಳೆದ 24 ತಾಸುಗಳಲ್ಲಿ ಕೊರೋನ ವೈರಸ್ ಸೋಂಕಿನ 595 ನೂತನ ಪ್ರಕರಣಗಳನ್ನು ಗುರುತಿಸಲಾಗಿದ್ದು, ಈ ಸೋಂಕಿನಿಂದ ಪೀಡಿತರಾದವರ ಸಂಖ್ಯೆ 7,167ಕ್ಕೇರಿದೆ’’ ಎಂದು ಇರಾನ್‌ನ ಆರೋಗ್ಯ ಸಚಿವರ ಸಲಹೆಗಾರರಾದ ಅಲಿರೆಝಾ ವಹಾಬ್‌ಝಾದೆಹ್ ತಿಳಿಸಿದ್ದಾರೆ. ಈವರೆಗೆ ಇರಾನ್‌ನಾದ್ಯಂತ 2394 ಕೊರೋನ ಸೋಂಕಿನ ಪ್ರಕರಣಗಳು ದೃಢಪಟ್ಟಿರುವುದಾಗಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News