ಅಮಿತ್ ಪಾಂಗಲ್ ಒಲಿಂಪಿಕ್ಸ್ ಗೆ ತೇರ್ಗಡೆ

Update: 2020-03-09 18:06 GMT

ಅಮ್ಮನ್ (ಜೋರ್ಡಾನ್), ಮಾ. 9: ವಿಶ್ವ ಬೆಳ್ಳಿ ಪದಕ ವಿಜೇತ ಮತ್ತು ಅಗ್ರ ಶ್ರೇಯಾಂಕದ ಅಮಿತ್ ಪಾಂಗಲ್ (52 ಕೆ.ಜಿ) ಸೋಮವಾರ ಇಲ್ಲಿ ನಡೆದ ಬಾಕ್ಸಿಂಗ್ ಏಶ್ಯನ್ ಕ್ವಾಲಿಫೈಯರ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಫಿಲಿಪೈನ್ಸ್‌ನ ಪರಿಚಿತ ವೈರಿ ಕಾರ್ಲೊ ಪಾಲಮ್ ಅವರನ್ನು ಸೋಲಿಸುವ ಮೂಲಕ ಮೊದಲ ಬಾರಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದರು.

ಏಶ್ಯದ ಕ್ರೀಡಾಕೂಟ ಮತ್ತು ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತ ಅಗ್ರ ಶ್ರೇಯಾಂಕದ ಪಾಲಮ್ ವಿರುದ್ಧ 4-1 ಅಂತರದಲ್ಲಿ ಮೇಲುಗೈ ಸಾಧಿಸಿದರು.

ಈ ಹಿಂದೆ 2018ರ ಏಶ್ಯನ್ ಕ್ರೀಡಾಕೂಟದ ಸೆಮಿಫೈನಲ್ ಮತ್ತು 2019ರ ವಿಶ್ವ ಚಾಂಪಿಯನ್‌ಶಿಪ್ ಕ್ವಾರ್ಟರ್ ಫೈನಲ್‌ನಲ್ಲಿ ಪಾಲಮ್ ಅವರನ್ನು ಸೋಲಿಸಿದ್ದರು.

ಕ್ವಾರ್ಟರ್ ಫೈನಲ್‌ನಲ್ಲಿ ಸೋತಿರುವ ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ಸಾಕ್ಷಿ ಚೌಧರಿ (57 ಕೆ.ಜಿ) ಒಲಿಂಪಿಕ್ ಸ್ಥಾನವನ್ನು ಪಡೆಯಲು ವಿಫಲರಾಗಿದ್ದಾರೆ.

ಮಾಜಿ ವಿಶ್ವ ಯುವ ಚಾಂಪಿಯನ್ ಆಗಿರುವ ಇಮ್ ಅಜಿ ವಿರುದ್ಧ 19 ವರ್ಷದ ಚೌಧರಿ 0-5ರಿಂದ ಸೋತರು. ಇದೀಗ ನಡೆಯುತ್ತಿರುವ ಈವೆಂಟ್‌ನ ಮಹಿಳೆಯರ 57 ಕೆ.ಜಿ ವಿಭಾಗದಲ್ಲಿ ಸೆಮಿಫೈನಲ್ ತಲುಪಿದವರಿಗೆ ಮಾತ್ರ ಒಲಿಂಪಿಕ್‌ಗೆ ಸ್ಥಾನ ಪಡೆಯಲು ಅವಕಾಶ ಇದೆ. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಮೇ ತಿಂಗಳಲ್ಲಿ ವಿಶ್ವ ಅರ್ಹತಾ ಪಂದ್ಯದಲ್ಲಿ ಹಣಾಹಣಿ ನಡೆಸಬೇಕಾಗಿದೆ. ಜಪಾನ್‌ನ 19 ವರ್ಷದ ಇರಿ ಸೇನಾ ಅವರನ್ನು ಇಮ್ ಎದುರಿಸಲಿದ್ದಾರೆ. ಅವರು ವಿಶ್ವದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಮನೀಶ್ ಕೌಶಿಕ್ (63 ಕೆ.ಜಿ.) ಮೂರನೇ ಶ್ರೇಯಾಂಕಿತ ಮಂಗೋಲಿಯದ ಚಿನ್ಜೋರಿಗ್ ಬತಾರ್ಸುಖ್ ವಿರುದ್ಧ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯಲು ಹಣಾಹಣಿ ನಡೆಸಲಿದ್ದಾರೆ. ಬತಾರ್ಸುಖ್ 2018ರ ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಎರು ಬಾರಿ ಪೋಡಿಯಂ ಫಿನಿಶರ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News