‘ನಮಸ್ತೆ’ ಮೂಲಕ ಅಭಿನಂದಿಸಿದ ಟ್ರಂಪ್, ಐರಿಶ್ ಪ್ರಧಾನಿ

Update: 2020-03-13 16:51 GMT

ವಾಶಿಂಗ್ಟನ್, ಮಾ. 13: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಆ ದೇಶಕ್ಕೆ ಭೇಟಿ ನೀಡಿರುವ ಐರ್‌ಲ್ಯಾಂಡ್ ಪ್ರಧಾನಿ ಲಿಯೋ ವರಾಡ್ಕರ್ ಗುರುವಾರ ಶ್ವೇತಭವನದಲ್ಲಿ ಸಾಂಪ್ರದಾಯಿಕ ಭಾರತೀಯ ಪದ್ಧತಿಯಾದ ‘ನಮಸ್ತೆ’ ಮೂಲಕ ಪರಸ್ಪರರನ್ನು ಅಭಿನಂದಿಸಿದರು.

ನೀವು ಕೈಕುಲುಕಿದಿರೇ ಎಂಬುದಾಗಿ ಓವಲ್ ಕಚೇರಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಐರಿಶ್ ಪ್ರಧಾನಿ ‘ನಮಸ್ತೆ’ ಮಾದರಿಯಲ್ಲಿ ಕೈಜೋಡಿಸಿ, ನಾವು ಹೀಗೆ ಅಭಿನಂದಿಸಿದೆವು ಎಂದು ಹೇಳಿದರು. ಆಗ ಟ್ರಂಪ್ ಕೂಡ ‘ನಮಸ್ತೆ’ ಮಾದರಿಯಲ್ಲಿ ಕೈಜೋಡಿಸಿದರು.

ಐರ್‌ಲ್ಯಾಂಡ್ ಪ್ರಧಾನಿ ಲಿಯೋ ವರಾಡ್ಕರ್ ಭಾರತ ಮೂಲದವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News