×
Ad

ಕೊರೋನವೈರಸ್: ಜಾಗತಿಕ ಸಾವಿನ ಸಂಖ್ಯೆ 5,043

Update: 2020-03-13 22:35 IST

ಪ್ಯಾರಿಸ್ (ಫ್ರಾನ್ಸ್), ಮಾ. 13: ಕೊರೋನವೈರಸ್ ಕಾಯಿಲೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಮೃತಪಟ್ಟವರ ಸಂಖ್ಯೆ 5,043ಕ್ಕೆ ಏರಿದೆ ಎಂದು ಎಎಫ್‌ಪಿ ಶುಕ್ರವಾರ ವರದಿ ಮಾಡಿದೆ. ಅಧಿಕೃತ ಅಂಕಿಸಂಖ್ಯೆಗಳನ್ನು ಬಳಸಿಕೊಂಡು ಸುದ್ದಿ ಸಂಸ್ಥೆಯು ಈ ಲೆಕ್ಕಾಚಾರವನ್ನು ಕೈಗೊಂಡಿದೆ.

ಚೀನಾದಲ್ಲಿ ಒಟ್ಟು 3,176 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದರ ಬಳಿಕ ಅತಿ ಹೆಚ್ಚು ಸಂಖ್ಯೆಯಲ್ಲಿ ಸಾವು ಸಂಭವಿಸಿರುವುದು ಇಟಲಿಯಲ್ಲಿ. ಅಲ್ಲಿ 1,016 ಮಂದಿ ಸಾವನ್ನಪ್ಪಿದ್ದಾರೆ. ಇರಾನ್‌ನಲ್ಲಿ 514 ಮಂದಿ ಈ ರೋಗದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂರು ದೇಶಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಸಾವುಗಳು ಸಂಭವಿಸಿವೆ.

ಕೋವಿಡ್-19 ಕಾಯಿಲೆಯು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮೊದಲ ಬಾರಿ ಕಾಣಿಸಿಕೊಂಡ ಬಳಿಕ, 121 ದೇಶಗಳಲ್ಲಿ 1,34,300ಕ್ಕೂ ಅಧಿಕ ಮಂದಿ ರೋಗದ ಸೋಂಕಿಗೆ ಗುರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News