ಕೋವಿಡ್-19 ಪರೀಕ್ಷೆಯಲ್ಲಿ ಕೇನ್ ರಿಚರ್ಡ್‌ಸನ್ ನೆಗೆಟಿವ್

Update: 2020-03-13 18:19 GMT

 ಸಿಡ್ನಿ, ಮಾ.13: ಆಸ್ಟ್ರೇಲಿಯದ ವೇಗದ ಬೌಲರ್ ಕೇನ್ ರಿಚರ್ಡ್‌ಸನ್ ಶುಕ್ರವಾರ ಕೊರೋನ ವೈರಸ್ ಭೀತಿಯಿಂದ ಪಾರಾಗಿದ್ದಾರೆ. ಅವರು ಕೊರೋನ ವೈರಸ್ ಪತ್ತೆ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ತಿಳಿಸಿದೆ.

ಈ ವಾರಾರಂಭದಲ್ಲಿ ದಕ್ಷಿಣ ಆಫ್ರಿಕಾದಿಂದ ಆಸ್ಟ್ರೇಲಿಯ ಕ್ರಿಕೆಟ್ ತಂಡದೊಂದಿಗೆ ಸ್ವದೇಶಕ್ಕೆ ವಾಪಸಾಗಿದ್ದ ಬಲಗೈ ವೇಗದ ಬೌಲರ್ ರಿಚರ್ಡ್ ಸನ್ ಗುರುವಾರ ಗಂಟಲು ನೋವಿದೆ ಎಂದು ವೈದ್ಯಕೀಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಆನಂತರ ಅವರನ್ನು ಮುಂಜಾಗ್ರತಾ ಕ್ರಮವಾಗಿ ಕೋವಿಡ್-19 ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು.

 ರಿಚರ್ಡ್‌ಸನ್ ಅವರ ಕೊರೋನ ವೈರಸ್ ಟೆಸ್ಟ್ ವರದಿ ನೆಗೆಟಿವ್ ಆಗಿತ್ತು. ‘‘ಕೋವಿಡ್-19 ಪರೀಕ್ಷೆಯಲ್ಲಿ ಇಂದು ಕೇನ್ ರಿಚರ್ಡ್‌ಸನ್ ಪಾಸಾಗಿದ್ದಾರೆ. ರಾತ್ರಿ 8 ಗಂಟೆಗೆ ಅವರು ವೈದ್ಯರಿಂದ ಆರೋಗ್ಯದ ಪ್ರಮಾಣಪತ್ರ ಸ್ವೀಕರಿಸಿದ್ದು, ನ್ಯೂಝಿಲ್ಯಾಂಡ್ ವಿರುದ್ಧ ಮೊದಲ ಏಕದಿನ ಪಂದ್ಯವನ್ನಾಡಲು ಸಿಡ್ನಿಗೆ ಪ್ರಯಾಣ ಬೆಳೆಸಿದ್ದಾರೆ’’ ಎಂದು ಕ್ರಿಕೆಟ್ ಡಾಟ್‌ಕಾಮ್‌ಡಾಟ್ ಎಯು ವರದಿ ಮಾಡಿದೆ.

29ರ ಹರೆಯದ ರಿಚರ್ಡ್‌ಸನ್ ಕಿವೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸಿಯಾನ್ ಅಬೊಟ್ ಬದಲಿಗೆ ತಂಡವನ್ನು ಸೇರಿದ್ದರು. ಐಪಿಎಲ್ 2020ರ ಆಟಗಾರರ ಹರಾಜಿನಲ್ಲಿ ರಿಚರ್ಡ್‌ಸನ್‌ರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ಫ್ರಾಂಚೈಸಿ ಖರೀದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News