ಚೀನಾ: ಹೊಸ ಕೊರೋನವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 11

Update: 2020-03-14 17:00 GMT

ಬೀಜಿಂಗ್, ಮಾ. 14: ಚೀನಾದಲ್ಲಿ ಶನಿವಾರ 11 ಹೊಸ ಕೊರೋನವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ ಆ ದೇಶದಲ್ಲಿ ಭೀಕರ ಸಾಂಕ್ರಾಮಿಕ ಕಾಯಿಲೆ ಆರಂಭಗೊಂಡಂದಿನಿಂದ ಇದೇ ಮೊದಲ ಬಾರಿಗೆ, ಈ ಪೈಕಿ ಹೆಚ್ಚಿನ ಪ್ರಕರಣಗಳ ಸೋಂಕುಗಳು ಹೊರಗಿನ ದೇಶಗಳಿಂದ ಬಂದವುಗಳಾಗಿವೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಸೊಂಕು ಕಾಣಿಸಿಕೊಂಡ ವುಹಾನ್ ನಗರದಲ್ಲಿ ನಾಲ್ಕು ಹೊಸ ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ವುಹಾನ್‌ನಲ್ಲಿ ವರದಿಯಾಗುತ್ತಿರುವ ಕನಿಷ್ಠ ದೈನಂದಿನ ಸೋಂಕು ಪ್ರಕರಣಗಳ ಸಂಖ್ಯೆಯಾಗಿದೆ.

ಇದೇ ಅವಧಿಯಲ್ಲಿ ಚೀನಾದಲ್ಲಿ 13 ಮಂದಿ ಕೊರೋನವೈರಸ್‌ನಿಂದಾಗಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಚೀನಾದಲ್ಲಿ ಮೃತಪಟ್ಟವರ ಸಂಖ್ಯೆ 3,189ಕ್ಕೆ ಏರಿದೆ ಹಾಗೂ ಸುಮಾರು 81,000 ಮಂದಿ ಸೋಂಕಿಗೆ ಒಳಗಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News