ಉ.ಪ್ರದೇಶ: ಸಿಎಎ ಪ್ರತಿಭಟನಾಕಾರರ ವಿರುದ್ಧ ‘ಗ್ಯಾಂಗ್‌ಸ್ಟರ್’ ಕಾಯ್ದೆಯಡಿ ಪ್ರಕರಣ ದಾಖಲು !
ಲಕ್ನೊ, ಮಾ.15: ಉತ್ತರಪ್ರದೇಶದಲ್ಲಿ 2019ರ ಡಿಸೆಂಬರ್‌ನಲ್ಲಿ ನಡೆದಿದ್ದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದಂತೆ 27 ಮಂದಿಯ ವಿರುದ್ಧ ಗ್ಯಾಂಗ್‌ಸ್ಟರ್ ಆ್ಯಂಡ್ ಆ್ಯಂಟಿ ಸೋಶಿಯಲ್ ಆ್ಯಕ್ಟಿವಿಟಿ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಈ ಪ್ರತಿಭಟನಾಕಾರರು ಗುಂಪು ಕಟ್ಟಿಕೊಂಡು ಸರಕಾರ ವಿರೋಧಿ ಕೃತ್ಯ ನಡೆಸಲು ಹಾಗೂ ಈ ಮೂಲಕ ಜನತೆಯಲ್ಲಿ ಆತಂಕ ಮೂಡಿಸಲು ಸಂಚು ಹೂಡಿದ್ದರು ಎಂದು ಲಕ್ನೊದಲ್ಲಿ ಪೊಲೀಸರು ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ.
ಈ 27 ಪ್ರತಿಭಟನಾಕಾರರು ಹತ್ಯೆ ಮಾಡುವ ಉದ್ದೇಶದಿಂದ ಪೊಲೀಸರತ್ತ ಗುಂಡು ಹಾರಿಸಿದ್ದಾರೆ. ಅಲ್ಲದೆ ಲಕ್ನೋದಲ್ಲಿರುವ ಪೊಲೀಸ್ ಹೊರಠಾಣೆಗೆ ಬೆಂಕಿ ಹಚ್ಚಿದ್ದಾರೆ. ಸರಕಾರಿ ಕಚೇರಿಗಳಿಗೆ ಹಾನಿ ಎಸಗಿ ಅಲ್ಲಿದ್ದ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಸರಕಾರಿ ಮತ್ತು ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಾಂಗ್ರೆಸ್ ನೇತೃತ್ವದ ಸರಕಾರ ಈ ವಿವಾದಾತ್ಮಕ ಕಾಯ್ದೆಯನ್ನು ಜಾರಿಗೊಳಿಸಿತ್ತು.