ಕೊರೋನಾವೈರಸ್: ಆಸ್ಪತ್ರೆಗಳಾಗಿ ಬದಲಾಗಲಿದೆಯೇ ಕ್ರಿಸ್ಟಿಯಾನೋ ರೊನಾಲ್ಡೋ ಹೋಟೆಲ್‍ ಗಳು?

Update: 2020-03-16 08:47 GMT

ಲಿಸ್ಬನ್ : ಸ್ಪೇನ್ ದೇಶದಲ್ಲಿ ಕೊರೊನಾವೈರಸ್ ಅಟ್ಟಹಾಸ ಮುಂದುವರಿದಿರುವಂತೆಯೇ ಸಹಾಯಹಸ್ತ ಚಾಚಿರುವ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ, ತಮ್ಮ ಒಡೆತನದ ಎಲ್ಲಾ ಸಿಆರ್7 ಹೋಟೆಲುಗಳನ್ನು ಸೋಂಕು ಪೀಡಿತರ ಚಿಕಿತ್ಸೆಗಾಗಿ ಆಸ್ಪತ್ರೆಗಳಾಗಿ ಮಾರ್ಪಡಿಸಲು ಮುಂದೆ ಬಂದಿದ್ದಾರೆ. ಈ ಸೌಲಭ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ಸುದ್ದಿ ಸುಳ್ಳು ಎಂದು ಕ್ರಿಸ್ಟಿಯಾನೋ ರೊನಾಲ್ಡೋ ಅವರ ಹೊಟೇಲ್ ಗಳಲ್ಲೊಂದು ಸ್ಪಷ್ಟಪಡಿಸಿದೆ.

ರೊನಾಲ್ಡೋ ಅವರೇ ಈ ಆಸ್ಪತ್ರೆಯಲ್ಲಿ ಸೇವೆಯೊದಗಿಸುವ ವೈದ್ಯರು ಹಾಗೂ ಸಿಬ್ಬಂದಿಗಳ ವೇತನ ಭರಿಸಲಿದ್ದಾರೆ ಎಂದೂ ವರದಿಗಳು ತಿಳಿಸಿದ್ದವು.

ಸ್ವತಃ ಕ್ರಿಸ್ಟಿಯಾನೋ ರೊನಾಲ್ಡೋ ಅವರು ಪೋರ್ಚುಗಲ್‍ ನ ಮಡೇರಾ ಎಂಬಲ್ಲಿ ಸ್ವಯಂ ದಿಗ್ಬಂಧನದಲ್ಲಿದ್ದಾರೆ. ಅವರ ಜುವೆಂಟಸ್ ಸಹ ಆಟಗಾರ ಡೇನೀಲ್ ರುಗಾನಿ ಅವರಲ್ಲಿ ಕೊರೋನಾ ಸೋಂಕು ದೃಢಪಟ್ಟ ನಂತರ ರೊನಾಲ್ಡೋ ಅವರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದೂ ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News