ಅಮೆರಿಕ ನೌಕಾಪಡೆ ಹಡಗಿನಲ್ಲಿ ಮೊದಲ ಕೊರೋನವೈರಸ್ ಪತ್ತೆ
Update: 2020-03-16 22:14 IST
ವಾಶಿಂಗ್ಟನ್, ಮಾ. 16: ನೌಕಾಪಡೆ ಹಡಗೊಂದರಲ್ಲಿ ಮೊದಲ ಶಂಕಿತ ಕೊರೋನವೈರಸ್ ಸೊಂಕು ಪ್ರಕರಣ ಪತ್ತೆಯಾಗಿದೆ ಎಂದು ಅಮೆರಿಕ ನೌಕಾಪಡೆ ತಿಳಿಸಿದೆ.
‘‘‘ಯುಎಸ್‌ಎಸ್ ಬಾಕ್ಸರ್’ ದಾಳಿ ನೌಕೆಯಲ್ಲಿರುವ ನಾವಿಕರೊಬ್ಬರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿರುವುದಾಗಿ ವರದಿಯಾಗಿದೆ. ಇದನ್ನು ಆರೋಗ್ಯ ಅಧಿಕಾರಿಗಳು ಖಚಿತಪಡಿಸಬೇಕಾಗಿದೆ’’ ಎಂದು ರವಿವಾರ ಸಂಜೆ ನೀಡಿದ ಹೇಳಿಕೆಯೊಂದರಲ್ಲಿ ಅಮೆರಿಕ ನೌಕಾಪಡೆ ತಿಳಿಸಿದೆ.
ಪ್ರಸಕ್ತ ಅಮೆರಿಕದ ಸ್ಯಾನ್ ಡೀಗೊದಲ್ಲಿರುವ ನೌಕಾ ನೆಲೆಯೊಂದರ ಬಂದರಿನಲ್ಲಿ ‘ಯುಎಸ್‌ಎಸ್ ಬಾಕ್ಸರ್’ ಲಂಗರು ಹಾಕಿದೆ.