ಐಸಿಸಿ ಅಂಪೆರ್‌ಗಳ ಪ್ರಗತಿ ಸಮಿತಿಯಲ್ಲಿ ವೃಂದಾ ರತಿ, ಜನನಿ

Update: 2020-03-18 18:25 GMT

ಮುಂಬೈ, ಮಾ.18: ಮುಂಬೈನ ವೃಂದಾ ರತಿ ಹಾಗೂ ತಮಿಳುನಾಡಿನ ಎನ್.ಜನನಿ ಬುಧವಾರ ಐಸಿಸಿ ಅಂಪೈರ್‌ಗಳ ಪ್ರಗತಿ ಸಮಿತಿಯಲ್ಲಿ ಸೇರ್ಪಡೆಯಾಗಿದ್ದಾರೆ.

‘‘ಐಸಿಸಿ ಅಂಪೈರ್‌ಗಳ ಅಭಿವೃದ್ಧಿ ಸಮಿತಿಯಲ್ಲಿ ಸೇರ್ಪಡೆಯಾಗಿರುವ ವೃಂದಾ ರತಿ(ಮುಂಬೈ ಕ್ರಿಕೆಟ್ ಸಂಸ್ಥೆ) ಹಾಗೂ ಜನನಿ ಎನ್.(ತಮಿಳುನಾಡು ಕ್ರಿಕೆಟ್ ಸಂಸ್ಥೆ)ಅವರಿಗೆ ಮುಂಬೈ ಕ್ರಿಕೆಟ್ ಸಂಸ್ಥೆಯಿಂದ ಅಭಿನಂದನೆಗಳು’’ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ ಟ್ವಿಟರ್‌ನಲ್ಲಿ ಬರೆದಿದೆ.

ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ಈ ಬೆಳವಣಿಗೆಯ ಬಗ್ಗೆ ಪತ್ರದ ಮುಖಾಂತರ ಇಬ್ಬರು ಅಂಪೈರ್‌ಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೃಂದಾ ಅವರು ಫುಟ್ಬಾಲ್ ಆಟಗಾರ್ತಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದು, ಆ ಬಳಿಕ ಅಂಪೈರ್ ಆಗಿ ವೃತ್ತಿ ಆರಂಭಿಸಿದರು. ಟಿ-20 ಮುಂಬೈ ಲೀಗ್‌ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News