ದ್ಯುತಿ ಚಂದ್‌ಗೆ ಒಲಿಂಪಿಕ್ಸ್ ಗೆ ಅವಕಾಶ ಕೈ ತಪ್ಪುವ ಭೀತಿ

Update: 2020-03-18 18:48 GMT

 ಹೊಸದಿಲ್ಲಿ, ಮಾ.18: ಭಾರತದ ವೇಗದ ಓಟಗಾರ್ತಿ ದ್ಯುತಿ ಚಂದ್‌ಗೆ ಒಲಿಂಪಿಕ್ಸ್‌ನಲ್ಲಿ ಅವಕಾಶ ಕೈತಪ್ಪುವ ಭೀತಿ ಎದುರಾಗಿದೆ.

   ಕೊರೋನ ವೈರಸ್‌ನಿಂದಾಗಿ ಯುರೋಪಿಯನ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಹಾದಿ ಬಂದ್ ಆಗಿದೆ. ಇದರಿಂದಾಗಿ ಅವರಿಗೆ ಒಲಿಂಪಿಕ್ಸ್ ಅರ್ಹತೆ ಪಡೆಯುವ ಯೋಜನೆಗಳ ಮೇಲೆ ಪರಿಣಾಮ ಬೀರಿದೆ .

   24 ವರ್ಷದ ದ್ಯುತಿ ಮಾರ್ಚ್ 2ರಿಂದ ಜರ್ಮನಿಯಲ್ಲಿ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಗಳಲ್ಲಿ ಮತ್ತು ತರಬೇತಿಯಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ವೀಸಾ ಮತ್ತು ಪ್ರಾಯೋಜಕತ್ವವನ್ನು ಪಡೆದಿದ್ದರೂ ಸಹ ಯುರೋಪ್ ಈಗ ಕೊರೋನ ವೈರಸ್‌ನ ಕೇಂದ್ರ ಬಿಂದುವಾಗಿರುವುದರಿಂದ ಆಕೆಗೆ ಅಲ್ಲಿಗೆ ಬರಲು ಸಾಧ್ಯವಾಗಲಿಲ್ಲ.

  ‘‘ನಾನು ಮಾರ್ಚ್ 2ರಿಂದ ಜರ್ಮನಿಯಲ್ಲಿ ತರಬೇತಿ ಮತ್ತು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಹೋಗಬೇಕಾಗಿತ್ತು. ನಾನು ಯುರೋಪ್‌ನಲ್ಲಿ ಕೆಲವು ಗುಣಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಯೋಚಿಸುತ್ತಿದ್ದೆ ಮತ್ತು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬೇಕೆಂದು ಆಶಿಸುತ್ತಿದ್ದೆ. ಆದರೆ ಈ ಕೊರೋನ ವೈರಸ್ ಕಾರಣದಿಂದಾಗಿ ನನ್ನ ಎಲ್ಲಾ ಯೋಜನೆಗಳು ತಲೆಕೆಳಗಾಗಿವೆ’’ ಎಂದು ಪಟಿಯಾಲಾದಲ್ಲಿ ದ್ಯುತಿ ಚಂದ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

‘‘ ನಾನು ವೀಸಾ ಮತ್ತು ಇತರ ಪ್ರಯಾಣದ ದಾಖಲೆಗಳನ್ನು ಪಡೆದುಕೊಂಡಿದ್ದೇನೆ ಮತ್ತು ಜರ್ಮನಿಗೆ ಹೋಗಲು ಸಿದ್ಧನಾಗಿದ್ದೆ. ಆದರೆ ಇದ್ದಕ್ಕಿದ್ದಂತೆ ಜರ್ಮನಿಯ ತರಬೇತಿ ನೆಲೆಯಿಂದ ಕೊರೋನ ವೈರಸ್ ಹರಡುವುದರಿಂದ ನಾನು ಬರಬಾರದು ಎಂಬ ಸಂದೇಶ ಬಂದಿತು. ನಾನು ತುಂಬಾ ನಿರಾಶೆಗೊಂಡಿದ್ದೇನೆ’’ಎಂದು ಹೇಳಿದರು.

  ಜುಲೈ-ಆಗಸ್ಟ್‌ನಲ್ಲಿ ನಿಗದಿಯಾಗಿದ್ದ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವ ಬಗ್ಗೆ ಕೇಳಿದಾಗ ‘‘2018ರ ಏಶ್ಯನ್ ಕ್ರೀಡಾಕೂಟದಲ್ಲಿ 100 ಮೀ. ಮತ್ತು 200 ಮೀ. ಎರಡರಲ್ಲೂ ಬೆಳ್ಳಿ ಗೆದ್ದ ದ್ಯುತಿ ಅವರು ಒಲಿಂಪಿಕ್ಸ್ ವಿಚಾರ ನನಗೆ ಗೊತ್ತಿಲ್ಲ. ನಾನು ಅರ್ಹತೆ ಪಡೆಯದಿರಬಹುದು ಎಂಬ ಆತಂಕದಲ್ಲಿದ್ದೇನೆ . ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ತುಂಬಾ ಕಠಿಣವಾಗಿದೆ. ಅರ್ಹತಾ ಗುರುತು 11.15 ಸೆಕೆಂಡ್‌ಗಳು’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News