ಕೊರೋನ ಭೀತಿ: ನಿಗಾ ಘಟಕದ ಬಟ್ಟೆ ಶುಚಿಗೊಳಿಸಲು ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ

Update: 2020-03-19 17:28 GMT

ಪುಣೆ, ಮಾ. 19: ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿರುವ ಕೊರೋನ ವೈರಸ್ ಸೋಂಕಿತರ ಬಟ್ಟೆಗಳನ್ನು ಸ್ವಚ್ಚಗೊಳಿಸಲು ಇಲ್ಲಿನ ದೋಬಿ ಸೇವೆ ನೀಡುವ ಸಿಬ್ಬಂದಿ ನಿರಾಕರಿಸಿದ್ದಾರೆ.

ವಾರ್ಡ್ ಸಿಬ್ಬಂದಿ ಸೋಮವಾರ ಮೇಲು ಹೊದಿಕೆ, ಕಿಟಕಿ ಪರದೆಯಂತಹ ನಿಗಾ ವಾರ್ಡ್‌ನ ಬಟ್ಟೆಗಳನ್ನು ಬಟ್ಟೆಗಳನ್ನು ಶುಚಿಗೊಳಿಸುವ ದೋಬಿಗೆ ನೀಡಿದ್ದಾರೆ. ಆದರೆ, ಅವರು ಕೊರೋನ ವೈರಸ್ ಸೋಂಕಿನ ಭೀತಿಯಿಂದ ನಿಗಾ ವಾರ್ಡ್‌ನ ಬಟ್ಟೆಗಳನ್ನು ಶುಚಿಗೊಳಿಸಲು ನಿರಾಕರಿಸಿದ್ದಾರೆ.

ಈ ಬಟ್ಟೆಗಳನ್ನು ಸ್ಪರ್ಶಿಸಿದರೆ, ನಮಗೆ ಕೂಡ ಕೊರೋನ ವೈರಸ್ ಸೋಂಕು ತಗಲಬಹುದು ಎಂಬ ಬೀತಿ ಇದೆ ಎಂದು ದೋಬಿ ಅಶೋಕ್ ಚೌಧರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News