ಒಡಿಶಾ: ಸಿಎಎ,ಎನ್‌ಆರ್‌ಸಿ ವಿರೋಧಿಸಿ 402 ಗ್ರಾಮಸಭೆಗಳಿಂದ ನಿರ್ಣಯ ಅಂಗೀಕಾರ

Update: 2020-03-19 17:54 GMT

ಹೊಸದಿಲ್ಲಿ,ಮಾ.19: ಅಭೂತಪೂರ್ವ ಕ್ರಮವೊಂದರಲ್ಲಿ ಒಡಿಶಾದ 15 ಜಿಲ್ಲೆಗಳ 402 ಗ್ರಾಮಸಭಾಗಳು ವಿವಾದಾಸ್ಪದ ಸಿಎಎ ಜಾರಿಯನ್ನು ನಿಲ್ಲಿಸುವಂತೆ ಮತ್ತು ಎನ್‌ಪಿಆರ್ ಪ್ರಕ್ರಿಯೆಯಿಂದ ಹಿಂದೆ ಸರಿಯುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿ ನಿರ್ಣಯಗಳನ್ನು ಅಂಗೀಕರಿಸಿವೆ.

11 ರಾಜ್ಯ ಸರಕಾರಗಳು ಈಗಾಗಲೇ ಇಂತಹ ನಿರ್ಣಯಗಳನ್ನು ಅಂಗೀಕರಿಸಿವೆ, ಆದರೆ ಇದೇ ಮೊದಲ ಬಾರಿಗೆ ಗ್ರಾಮಸಭಾಗಳು ಎನ್‌ಪಿಆರ್,ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿ ಸರಕಾರದ ಮೇಲೆ ಒತ್ತಡ ಹೇರಲು ಈ ಹೆಜ್ಜೆಯನ್ನಿರಿಸಿವೆ.

ಗ್ರಾಮಗಳಲ್ಲಿ ನಿರ್ಣಯಗಳ ಅಂಗೀಕಾರಗಳ ಬೆನ್ನಿಗೇ ಒಡಿಶಾ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಮತ್ತು 15 ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ಅಹವಾಲನ್ನು ಕಳುಹಿಸಲಾಗಿದೆ.

ನಾಗರಿಕ ಸಂಘಟನೆ ಕ್ಯಾಂಪೇನ್ ಫಾರ್ ಸರ್ವೈವಲ್ ವಿಥ್ ಡಿಗ್ನಿಟಿ,ಒಡಿಶಾ ನಾರಿ ಸಮಾಜ ಮತ್ತು ಇತರ ಸಮಾನಮನಸ್ಕ ಸಾಮಾಜಿಕ ಸಂಘಟನೆಗಳು ಈ ಗ್ರಾಮಗಳಲ್ಲಿ ಎನ್‌ಪಿಎ-ಸಿಎಎ-ಎನ್‌ಆರ್‌ಸಿ ವಿರುದ್ಧ ಪ್ರಚಾರ ಅಭಿಯಾನ ನಡೆಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News