×
Ad

ಕೊರೋನಾ ವೈರಸ್ ಆತಂಕ: ಸಾರ್ವಜನಿಕ ಸ್ಥಳದಲ್ಲಿ ಸೀನಿದ್ದಕ್ಕಾಗಿ ವ್ಯಕ್ತಿಗೆ ಥಳಿತ

Update: 2020-03-19 23:31 IST

ಕೊಲ್ಹಾಪುರ, ಮಾ. 19: ಸಾರ್ವಜನಿಕ ಸ್ಥಳದಲ್ಲಿ ಸೀನಿದ ಕಾರಣಕ್ಕೆ ಬೈಕ್ ಸವಾರೋರ್ವರನ್ನು ಹಿಡಿದು ಥಳಿಸಿದ ಘಟನೆಯ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಗುರುವಾರ ನಡೆದಿದೆ. ನಗರದ ಗುಜಾರಿ ಪ್ರದೇಶದಲ್ಲಿ ನಡೆದಿರುವ ಈ ಘಟನೆ ಸಿಸಿಟಿವಿ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ಈ ಘಟನೆ ಬಗ್ಗೆ ಯಾರು ಕೂಡ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕೊರೋನ ವೈರಸ್ ಹರಡುತ್ತಿರುವುದರಿಂದ ಕರವಸ್ತ್ರವನ್ನು ಮುಖಕ್ಕೆ ಹಿಡಿಯದ ಸೀನಿದ್ದು ಯಾಕೆ ಎಂದು ಓರ್ವ ಬೈಕ್ ಸವಾರ ಇನ್ನೋರ್ವ ಬೈಕ್ ಸವಾರನರಲ್ಲಿ ಪ್ರಶ್ನಿಸಿರುವುದು ವೀಡಿಯೊದಲ್ಲಿ ದಾಖಲಾಗಿತ್ತು. ಇದು ಪರಸ್ಪರ ವಾಗ್ವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಸೀನಿದ ಬೈಕ್ ಸವಾರನಿಗೆ ಇನ್ನೊಂದು ಬೈಕ್‌ನ ಸವಾರ ಥಳಿಸಿದ್ದ. ಈ ಘಟನೆಯಿಂದಾಗಿ ಸಂಚಾರ ಅಡೆತಡೆ ಉಂಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News