ಕೇಂದ್ರೀಯ ಸಂಸ್ಕೃತ ವಿವಿಗಳ ಮಸೂದೆಗೆ ಸಂಸತ್ ಅಂಗೀಕಾರ

Update: 2020-03-20 17:17 GMT

ಹೊಸದಿಲ್ಲಿ,ಮಾ.20: ಮೂರು ಡೀಮ್ಡ್ ಸಂಸ್ಕೃತ ವಿವಿಗಳನ್ನು ಕೇಂದ್ರೀಯ ವಿವಿಗಳಾಗಿ ಮೇಲ್ದರ್ಜೆಗೇರಿಸಲು ಅವಕಾಶ ಕಲ್ಪಿಸುವ ಕೇಂದ್ರೀಯ ಸಂಸ್ಕೃತ ವಿವಿಗಳ ಮಸೂದೆಯನ್ನು ಸಂಸತ್ತು ಶುಕ್ರವಾರ ಅಂಗೀಕರಿಸಿದೆ.

 ಈ ವಾರದ ಪೂರ್ವಾರ್ಧದಲ್ಲಿ ರಾಜ್ಯಸಭೆಯು ಕೆಲವು ತಿದ್ದುಪಡಿಗಳೊಂದಿಗೆ ಮಸೂದೆಯನ್ನು ಧ್ವನಿಮತದಿಂದ ಅಂಗೀಕರಿಸಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿಯೇ ಲೋಕಸಭೆಯು ಮಸೂದೆಯನ್ನು ಅಂಗೀಕರಿಸಿತ್ತಾದರೂ ರಾಜ್ಯಸಭೆಯು ತಿದ್ದುಪಡಿಗಳನ್ನು ಮಾಡಿದ್ದರಿಂದ ಶುಕ್ರವಾರ ಮತ್ತೊಮ್ಮೆ ಮಸೂದೆಯನ್ನು ಕೈಗೆತ್ತಿಕೊಂಡಿದ್ದ ಸದನವು ಅದನ್ನು ಧ್ವನಿಮತದಿಂದ ಅಂಗೀಕರಿಸಿತು.

ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ,ಶ್ರೀ ಲಾಲಬಹಾದೂರ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ಮತ್ತು ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ಇವು ಕೇಂದ್ರೀಯ ವಿವಿಗಳಾಗಿ ಮೇಲ್ದರ್ಜೆಗೇರಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News