​ಅಮೆರಿಕ ಉಪಾಧ್ಯಕ್ಷರ ಕಚೇರಿಗೂ ಕೊರೋನಾ ವೈರಸ್ ಲಗ್ಗೆ !

Update: 2020-03-21 04:28 GMT
ಮೈಕ್ ಪೆನ್ಸ್

ವಾಷಿಂಗ್ಟನ್ : ಅಮೆರಿಕದಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕವನ್ನು ತಡೆಯುವ ಹೊಣೆ ಹೊತ್ತಿರುವ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ಕಚೇರಿ ಸಿಬ್ಬಂದಿಗೇ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಟ್ರಂಪ್ ಅಥವಾ ಉಪಾಧ್ಯಕ್ಷ ಪೆನ್ಸ್ ಅವರು ಈ ಅಧಿಕಾರಿ ಜತೆ ನಿಕಟ ಸಂಪರ್ಕದಲ್ಲಿ ಇರಲಿಲ್ಲ. ಈ ವ್ಯಕ್ತಿಯ ಜತೆ ಯಾರು ಸಂಪರ್ಕದಲ್ಲಿದ್ದರು ಎನ್ನುವುದನ್ನು ಪತ್ತೆ ಮಾಡಲಾಗುತ್ತಿದೆ ಎಂದು ಮಾಧ್ಯಮ ಕಾರ್ಯದರ್ಶಿ ಕೀತ್ ಮಿಲ್ಲರ್ ಹೇಳಿದ್ದಾರೆ.

ಪ್ರತಿದಿನ ವೈರಸ್ ಸೋಂಕು ತಡೆಗೆ ಅಮೆರಿಕ ಕೈಗೊಳ್ಳುತ್ತಿರುವ ಕ್ರಮಗಳ ಬಗೆಗೆ ಮಾಹಿತಿ ನೀಡಲು ಟ್ರಂಪ್ ಕರೆಯುತ್ತಿದ್ದ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಪಕ್ಕವೇ ಪೆನ್ಸ್ ಆಸೀನರಾಗುತ್ತಿದ್ದರು. ಅಮೆರಿಕದ ಉನ್ನತ ರಾಜಕಾರಣಿಗಳ ವಲಯದಲ್ಲೂ ಕೋವಿಡ್-19 ಹರಡಿರುವುದಕ್ಕೆ ಈ ನಿದರ್ಶನ ಸ್ಪಷ್ಟ ಸಾಕ್ಷಿಯಾಗಿದೆ.

ಟ್ರಂಪ್ ಮತ್ತು ಪೆನ್ಸ್ ಅವರಿದ್ದ ರಾಜಕೀಯ ಸಮಾವೇಶದಲ್ಲಿ ಪಾಲ್ಗೊಂಡ ವ್ಯಕ್ತಿಯೊಬ್ಬರಿಗೆ ವೈರಸ್ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದರು. ಕಳೆದ ವಾರ ಟ್ರಂಪ್ ಅವರನ್ನು ಕೊರೋನಾ ವೈರಸ್ ಪರೀಕ್ಷೆಗೆ ಗುರಿಪಡಿಸಿದಾಗ ಋಣಾತ್ಮಕ ಫಲಿತಾಂಶ ಬಂದಿತ್ತು. ಅಮೆರಿಕದಲ್ಲಿ ಇದುವರೆಗೆ 216 ಸಾವು ಸಂಭವಿಸಿದ್ದು, 16600 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News