ಕನಿಕಾ ಔತಣಕೂಟದಲ್ಲಿ ಪಾಲ್ಗೊಂಡಿದ್ದ 28 ಜನರಿಗೆ ಕೊರೊನಾ ಸೋಂಕು ಇಲ್ಲ: ಪ್ರಯೋಗಾಲಯದ ವರದಿ

Update: 2020-03-21 18:15 GMT

ಲಕ್ನೊ, ಮಾ.21: ಗಾಯಕಿ ಕನಿಕಾ ಕಪೂರ್ ಮುಖ್ಯ ಅತಿಥಿಯಾಗಿದ್ದ ಔತಣ ಕೂಟದಲ್ಲಿ ಪಾಲ್ಗೊಂಡಿದ್ದ ಉತ್ತರಪ್ರದೇಶದ ಸಚಿವ ಜೈಪ್ರತಾಪ್ ಸಿಂಗ್ ಹಾಗೂ ಇತರ 28 ಮಂದಿ ಕೊರೊನ ಸೋಂಕು ಪೀಡಿತರಾಗಿಲ್ಲ ಎಂದು ಪ್ರಯೋಗಾಲಯದ ವರದಿ ತಿಳಿಸಿದೆ.

 ಕನಿಕಾ ಕಪೂರ್‌ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಜೈಪ್ರತಾಪ್ ಸಿಂಗ್ ಸ್ವಯಂ ನಿರ್ಬಂಧಕ್ಕೆ ಒಳಗಾಗಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 28 ಮಂದಿಯ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ . ಈ ಬಗ್ಗೆ ಕೆಜಿಎಂಯು ಕುಲಪತಿ ತನಗೆ ಮಾಹಿತಿ ನೀಡಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ಆದರೂ, ಮುಂಜಾಗರೂಕತಾ ಕ್ರಮವಾಗಿ ಸಚಿವರು ಹಾಗೂ ಅವರ ಕುಟುಂಬದ ಐದು ಸದಸ್ಯರನ್ನು 14 ದಿನ ಮನೆಯಲ್ಲಿಯೇ ಇರುವಂತೆ ಸಲಹೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  ಕೋನಿಕಾ ಕಪೂರ್ ಕಾರ್ಯಕ್ರಮದ ಮರುದಿನ ಸಚಿವ ಜೈಪ್ರತಾಪ್ ಸಿಂಗ್ ನಡೆಸಿದ್ದ ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ಉತ್ತರಪ್ರದೇಶದ 3 ಶಾಸಕರು, ಅಧಿಕಾರಿಗಳು, ಹಾಗೂ ಪತ್ರಕರ್ತರು ಆ ಬಳಿಕ ಸ್ವಯಂ ನಿರ್ಬಂಧಕ್ಕೆ ಒಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News