ಅನಿವಾರ್ಯವಲ್ಲದ ಸೇವೆ ರದ್ದುಪಡಿಸಿದ ಭಾರತೀಯ ಬ್ಯಾಂಕ್ ಸಂಘಟನೆ
Update: 2020-03-22 14:03 IST
ಹೊಸದಿಲ್ಲಿ, ಮಾ.22: ನಾಳೆ(ಮಾ.23)ಯಿಂದ ಭಾರತದಲ್ಲಿರುವ ಎಲ್ಲ ಬ್ಯಾಂಕ್ ಶಾಖೆಗಳು ಅವಶ್ಯಕ ಸೇವೆಗಳನ್ನು ಮಾತ್ರ ನೀಡಲಿವೆೆ. ಅನಿವಾರ್ಯವಲ್ಲದ ಸೇವೆಯನ್ನು ರದ್ದುಪಡಿಸಲಿದೆ ಎಂದು ಭಾರತೀಯ ಬ್ಯಾಂಕ್‌ಗಳ ಸಂಘಟನೆ ರವಿವಾರ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ನಗದು ಠೇವಣಿ ಹಾಗೂ ಹಿಂತೆಗೆತ, ಚೆಕ್‌ಗಳ ಕ್ಲಿಯರೆನ್ಸ್, ಸರಕಾರದ ವಹಿವಾಟುಗಳನ್ನು ಬ್ಯಾಂಕ್‌ಗಳು ನಿರ್ವಹಿಸಲಿವೆ. ಎಲ್ಲ ಅನಿವಾರ್ಯವಲ್ಲದ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.