ಪೌರತ್ವದ ವಿಷಯದಲ್ಲಿ ಧರ್ಮ ಪರಿಗಣಿಸಬೇಡಿ: ಮೋದಿ, ಶಾ ಭೇಟಿಯಾಗಿ ಎ.ಪಿ. ಉಸ್ತಾದ್

Update: 2020-03-22 17:33 GMT

ಕೊಝಿಕೋಡ್,ಮಾ.22: ದೇಶದಲ್ಲಿ ಪೌರತ್ವ ವಿಷಯವನ್ನು ನಿರ್ಧರಿಸಲು ವ್ಯಕ್ತಿಯ ಧರ್ಮವನ್ನು ಪರಿಗಣಿಸಬಾರದು ಎಂದು ಸುನ್ನಿ ನಾಯಕ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರನ್ನು ಕೋರಿಕೊಂಡಿದ್ದಾರೆ.

ಶನಿವಾರ ದಿಲ್ಲಿಯಲ್ಲಿ ಮೋದಿ ಮತ್ತು ಶಾ ಅವರನ್ನು ಅವರ ಕಚೇರಿಗಳಲ್ಲಿ ಭೇಟಿಯಾದ ಎ.ಪಿ. ಉಸ್ತಾದ್ ಬೇಡಿಕೆಗಳನ್ನೊಳಗೊಂಡ ಪತ್ರವನ್ನು ಸಲ್ಲಿಸಿದರು.

ಸಿಎಎಗೆ ಸೂಕ್ತ ತಿದ್ದುಪಡಿಯನ್ನು ತರಬೇಕು ಎಂದು ಹೇಳಿದ ಅವರು,ಕಾಯ್ದೆಯಲ್ಲಿನ ಪೌರತ್ವಕ್ಕೆ ಅರ್ಹತೆ ಮಾನದಂಡಗಳ ಪಟ್ಟಿಯಿಂದ ಧರ್ಮದ ಹೆಸರುಗಳನ್ನು ತೆಗೆಯುವ ಮೂಲಕ ತಿದ್ದುಪಡಿಯನ್ನು ತರಬೇಕು ಎಂದರು.

ಜನಗಣತಿ ಒಂದೇ ಸಾಕಾಗುವುದರಿಂದ ಸರಕಾರವು ಎನ್‌ಪಿಆರ್ ಮತ್ತು ಎನ್‌ಆರ್‌ಸಿಗೆ ಮುಂದಾಗಬಾರದು ಎಂದ ಅವರು, ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಅಭದ್ರತೆಯ ಭಾವನೆಗಳನ್ನು ಸೃಷ್ಟಿಸುತ್ತವೆ ಹಾಗೂ ದೇಶದ ಏಕತೆ ಮತ್ತು ಸಮಗ್ರತೆಗೆ ಹಾನಿಯನ್ನುಂಟು ಮಾಡಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News