ಕೋಲ್ಕತಾ: ಕೊರೋನವೈರಸ್ ಸೋಂಕಿತನ ಸಾವು

Update: 2020-03-23 17:30 GMT

ಕೋಲ್ಕತಾ, ಮಾ. 23: ಕೊರೋನವೈರಸ್ ಸೋಂಕಿತ ವ್ಯಕ್ತಿಯೋರ್ವ ಸೋಮವಾರ ಕೋಲ್ಕತಾದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾನೆ. ಇದು ಪಶ್ಚಿಮ ಬಂಗಾಳದಲ್ಲಿ ಈ ಮಾರಣಾಂತಿಕ ಪಿಡುಗಿಗೆ ಮೊದಲ ಬಲಿಯಾಗಿದೆ.

57ರ ಹರೆಯದ ಮೃತವ್ಯಕ್ತಿ ಉತ್ತರ 24 ಪರಗಣಗಳ ಜಿಲ್ಲೆಯ ಡಮ್‌ಡಮ್ ನಿವಾಸಿಯಾಗಿದ್ದು, ಫೆ. 16ರಂದು ಆಸ್ಪತ್ರೆಗೆ ದಾಖಲಾಗಿದ್ದ ಮತ್ತು ಆತನಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಮೃತ ವ್ಯಕ್ತಿ ಯಾವುದೇ ವಿದೇಶಕ್ಕೆ ಪ್ರಯಾಣಿಸಿರಲಿಲ್ಲ, ಆದರೆ ಫೆಬ್ರವರಿಯಲ್ಲಿ ಛತ್ತೀಸ್‌ಗಡದ ಬಿಲಾಸಪುರಕ್ಕೆ ಭೇಟಿ ನೀಡಿದ್ದ. ಈಗ ಆತನ ಕುಟುಂಬ ಸದಸ್ಯರನ್ನು ಸರಕಾರಿ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ನಿರೀಕ್ಷಣೆಯಲ್ಲಿ ಇರಿಸಲಾಗಿದೆ ಎಂದು ಸರಕಾರಿ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News