ಸಿಡುಬು, ಪೋಲಿಯೋ ನಿರ್ಮೂಲನೆಗೈದ ಭಾರತಕ್ಕೆ ಕೊರೋನ ಎದುರಿಸುವ ಸಾಮರ್ಥ್ಯವಿದೆ: ವಿಶ್ವ ಆರೋಗ್ಯ ಸಂಸ್ಥೆ

Update: 2020-03-24 09:38 GMT

ಜಿನೀವಾ: ಈ ಹಿಂದೆ ಸಿಡುಬು ಹಾಗೂ ಪೋಲಿಯೋ ರೋಗಗಳನ್ನು ನಿರ್ಮೂಲನೆಗೈದ  ಅನುಭವವಿರುವ ಭಾರತವು ಕೊರೋನ ವೈರಸ್ ಸೋಂಕನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಮೈಕೇಲ್ ಜೆ ರ್ಯಾನ್ ಹೇಳಿದ್ದಾರೆ.

"ಕೊರೋನ ವೈರಸ್ ಅಧಿಕವಾಗಿರುವ ಕಡೆಗಳಲ್ಲಿ ಹೆಚ್ಚು ಲ್ಯಾಬ್‍ ಗಳನ್ನು ತೆರೆಯುವ ಅಗತ್ಯವಿದೆ'' ಎಂದು ಹೇಳಿದ ಅವರು "ಕೊರೋನ ವೈರಸ್‍ಗೆ ಸುಲಭದ ಉತ್ತರವಿಲ್ಲ. ಭಾರತದಂತಹ ದೇಶಗಳು ಹಿಂದೆ ಮಾಡಿದಂತೆ ಈಗ ಕೂಡ ಜಗತ್ತಿಗೆ ದಾರಿ ತೋರಿಸಬೇಕಿದೆ'' ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News