ಕೊರೋನ ವೈರಸ್ ಸೋಂಕು: ಸ್ಪೇನ್ ನಲ್ಲಿ ಒಂದೇ ದಿನ 738 ಸಾವು

Update: 2020-03-25 15:18 GMT

ಮ್ಯಾಡ್ರಿಡ್ , ಮಾ,25: ಕೊರೋನ ವೈರಸ್ ಸೋಂಕಿತ ರೋಗಿಗಳ ಸಾವಿನ ಸಂಖ್ಯೆ ಸ್ಪೇನ್ ನಲ್ಲಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಸ್ಪೇನ್ ನಲ್ಲಿ ಕೊರೋನ ವೈರಸ್ ಸೋಂಕಿತ 738 ಮಂದಿ ರೋಗಿಗಳು ಮೃತಪಟ್ಟಿದ್ದಾರೆ.

ಸ್ಪೇನ್ ನಲ್ಲಿ ಈ ಸಾಂಕ್ರಾಮಿಕ  ರೋಗದಿಂದಾಗಿ  ಬುಧವಾರದ ತನಕ 3,434  ಸಾವಿಗೀಡಗಿದ್ದಾರೆ. ಸ್ಪೇನ್ ನಲ್ಲಿ ಸಾವಿನ ಸಂಖ್ಯೆ ಚೀನಾವನ್ನು ಮೀರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜಾಗತಿಕವಾಗಿ  ಇಟಲಿ ಮಾತ್ರ ಈಗ ಸ್ಪೇನ್‌ಗಿಂತ ಹೆಚ್ಚಿನ ಸಾವಿನ ಸಂಖ್ಯೆಯನ್ನು ಹೊಂದಿದೆ. ಕಳೆದ ವರ್ಷ ಕೊನೆಯಲ್ಲಿ ವೈರಸ್ ಹೊರಹೊಮ್ಮಿದ ಚೀನಾದಲ್ಲಿ 3,281 ಜನರು ಸಾವನ್ನಪ್ಪಿದ್ದಾರೆ.  ಸ್ಪೇನ್ ನಲ್ಲಿ  ಈಗ 47,610  ಮಂದಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಇದೇ ಅವಧಿಯಲ್ಲಿ ಸಾವಿನ ಸಂಖ್ಯೆ 27 ಪ್ರತಿಶತದಷ್ಟು ಹೆಚ್ಚಾಗಿದೆ. ಎಪ್ರಿಲ್ 14 ರವರೆಗೆ ವಿಸ್ತರಿಸಲಾದ  ರಾಷ್ಟ್ರೀಯ ಲಾಕ್‌ಡೌನ್ ಹೊರತಾಗಿಯೂ  ಸಾವುಗಳು ಮತ್ತು ಸೋಂಕುಗಳು ಎರಡೂ ಹೆಚ್ಚುತ್ತಲೇ ಇವೆ, ಮ್ಯಾಡ್ರಿಡ್ ನಲ್ಲಿ  14,597  ಮಂದಿಗೆ ಸೋಂಕು ತಗಲಿದೆ. 1,825 ಸಾವು ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News