ಅಮೆರಿಕ: ಕೊರೋನಕ್ಕೆ ಬಲಿಯಾದವರ ಸಂಖ್ಯೆ 1,046ಕ್ಕೆ ಏರಿಕೆ

Update: 2020-03-26 17:13 GMT

ವಾಶಿಂಗ್ಟನ್, ಮಾ. 26: ನೂತನ-ಕೊರೋನವೈರಸ್‌ನಿಂದಾಗಿ ಅಮೆರಿಕದಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ ಕನಿಷ್ಠ 1,046ಕ್ಕೆ ಏರಿದೆ ಹಾಗೂ ದೇಶದ ಒಟ್ಟು ಸೋಂಕಿತರ ಸಂಖ್ಯೆ 68,572 ತಲುಪಿದೆ.

ಚೀನಾ ಮತ್ತು ಇಟಲಿ ಬಳಿಕ, ಅತಿ ಹೆಚ್ಚಿನ ಸಂಖ್ಯೆಯ ಸೋಂಕಿತರು ಈಗ ಅಮೆರಿಕದಲ್ಲಿದ್ದಾರೆ. ಅಮೆರಿಕದಲ್ಲಿ ಸಾಂಕ್ರಾಮಿಕದ ದಾಳಿಗೆ ಅತಿಹೆಚ್ಚು ನಲುಗಿದ ಪ್ರದೇಶವೆಂದರೆ ನ್ಯೂಯಾರ್ಕ್. ಅಲ್ಲಿ ಈವರೆಗೆ 280 ಸಾವುಗಳು ವರದಿಯಾಗಿವೆ.

ಅಮೆರಿಕದಲ್ಲಿ ಒಟ್ಟಾರೆ 7 ಕೋಟಿಯಿಂದ 15 ಕೋಟಿವರೆಗಿನ ಜನರು ಕೊರೋನವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಹೇಳುವ ವರದಿಯೊಂದನ್ನು ಈ ತಿಂಗಳ ಆದಿಭಾಗದಲ್ಲಿ ಅಮೆರಿಕದ ಸಂಸತ್ತು ಕಾಂಗ್ರೆಸ್‌ನಲ್ಲಿ ಮಂಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News