ಬಡ ದೇಶಗಳ ಸಾಲ ವಸೂಲಾತಿ ನಿಲ್ಲಿಸಿ: ಶ್ರೀಮಂತ ದೇಶಗಳಿಗೆ ಐಎಂಎಫ್, ವಿಶ್ವಬ್ಯಾಂಕ್ ಕರೆ

Update: 2020-03-26 17:28 GMT

ವಾಶಿಂಗ್ಟನ್, ಮಾ. 26: ಜಗತ್ತಿನ ಅತಿ ಬಡ ದೇಶಗಳಿಗೆ ಸಾಲ ಮರುಪಾವತಿ ಮಾಡಲು ಹೆಚ್ಚಿನ ಸಮಯಾವಕಾಶ ನೀಡುವಂತೆ ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವಬ್ಯಾಂಕ್ ಶ್ರೀಮಂತ ದೇಶಗಳಿಗೆ ಕರೆ ನೀಡಿವೆ. ಇದರಿಂದ ಕೊರೋನವೈರಸ್ ವಿರುದ್ಧದ ಹೋರಾಟದಲ್ಲಿ ತೊಡಗಿರುವ ಬಡ ದೇಶಗಳಿಗೆ ಸಹಾಯವಾಗುತ್ತದೆ ಎಂದು ವಾಶಿಂಗ್ಟನ್‌ನಲ್ಲಿರುವ ಜಾಗತಿಕ ಆರ್ಥಿಕ ಸಂಸ್ಥೆಗಳು ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿವೆ.

ಮುಖ್ಯವಾಗಿ ಉಪ ಸಹಾರ ಆಫ್ರಿಕದಲ್ಲಿ ವಾಸಿಸುತ್ತಿರುವ ಜಗತ್ತಿನ ಮೂರನೇ ಎರಡು ಅತಿ ಬಡ ಜನರಿಗೆ ಈ ಕ್ರಮದಿಂದ ಪ್ರಯೋಜನವಾಗುತ್ತದೆ. ಈ ದೇಶಗಳಿಗೆ ಅತಿ ಉದಾರವಾಗಿ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಇಂಟರ್‌ನ್ಯಾಶನಲ್ ಡೆವೆಲಪ್‌ಮೆಂಟ್ ಅಸೋಸಿಯೇಶನ್ (ಐಡಿಎ) ಸಾಲ ನೀಡುತ್ತದೆ. ಐಡಿಎಗೆ ಶ್ರೀಮಂತ ದೇಶಗಳು ಹಣಕಾಸು ಪೂರೈಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News