ಬ್ರಿಟಿಷ್ ಪ್ರಧಾನಿಗೆ ಕೊರೋನ ಪಾಸಿಟಿವ್ ಎಂದು ತಿಳಿದಾಗ ಹೊರಗೋಡಿದ ಹಿರಿಯ ಸಲಹೆಗಾರ

Update: 2020-03-28 09:34 GMT

ಲಂಡನ್: ಬ್ರಿಟನ್ ದೇಶದ ಪ್ರಧಾನಿ ಬೋರಿಸ್ ಜಾನ್ಸನ್ ತಮಗೆ ಕೊರೋನ ವೈರಸ್ ಸೋಂಕು ಇರುವುದು ದೃಢಪಟ್ಟಿದೆ  ಎಂದು ಶುಕ್ರವಾರ ಘೋಷಿಸಿದ ಕೆಲವೇ ಹೊತ್ತಿನಲ್ಲಿ ಅವರ ಹಿರಿಯ ಸಲಹೆಗಾರ ಹೊರಗೋಡಿದ್ದಾರೆ.

ಹಿರಿಯ ಸಲಹೆಗಾರರಾದ ಡಾಮಿನಿಕ್ ಕಮ್ಮಿಂಗ್ಸ್  ಹಸಿರು ಬಣ್ಣದ ರೈನ್ ಕೋಟ್ ಹಾಗೂ ಹೆಗಲಲ್ಲಿ ಒಂದು ಬ್ಯಾಗ್ ಹೊತ್ತುಕೊಂಡು ಅವಸವಸರದಲ್ಲಿ ಪ್ರಧಾನಿಯ ಅಧಿಕೃತ ನಿವಾಸವಿರುವ ಡೌನಿಂಗ್ ಸ್ಟ್ರೀಟಿನಿಂದ ಹೊರಗೋಡುತ್ತಿರುವ ದೃಶವನ್ನು ಟಿವಿ ವಾಹಿನಿಗಳು ಪ್ರಸಾರ ಮಾಡಿವೆ.

ಆದರೆ ಕಮ್ಮಿಂಗ್ಸ್ ಏಕೆ ಓಡಿ ಹೋಗುತ್ತಿದ್ದಾರೆಂಬುದು ಸ್ಪಷ್ಟವಾಗಿಲ್ಲ. ಅವರು ಹೊರಗೋಡುತ್ತಿರುವ ವೈರಲ್ ವಿಡಿಯೋ ಈ ಕೆಳಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News