ಅಮೆರಿಕದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳಿಗೆ ಭಾರತ-ಅಮೆರಿಕನ್ ಸಮುದಾಯದಿಂದ ನೆರವು

Update: 2020-03-28 19:30 GMT

ವಾಶಿಂಗ್ಟನ್, ಮಾ. 28: ಕೋವಿಡ್-19 ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಯಲು ಭಾರತದಲ್ಲಿ ಹಾಕಲಾಗಿರುವ ಬೀಗಮುದ್ರೆಯಿಂದಾಗಿ ಅಮೆರಿಕದಲ್ಲೇ ಸಿಕ್ಕಿಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ನೆರವಿಗೆ ಭಾರತೀಯ-ಅಮೆರಿಕನ್ ಸಮುದಾಯ ಧಾವಿಸಿದೆ.

ಲಾಕ್‌ಡೌನ್‌ನಿಂದಾಗಿ ಭಾರತಕ್ಕೆ ಮರಳಲು ಅಸಮರ್ಥರಾಗಿರುವ ವಿದ್ಯಾರ್ಥಿಗಳಿಗೆ ಭಾರತ ಮೂಲದ ಹೊಟೇಲ್ ಮಾಲೀಕರು ಮತ್ತು ಸಣ್ಣ ಉದ್ಯಮಿಗಳು ತಮ್ಮ ಹೊಟೇಲ್‌ಗಳು ಮತ್ತು ಮನೆಗಳಲ್ಲಿ ಉಚಿತ ವಾಸ್ತವ್ಯ ಒದಗಿಸಿದ್ದಾರೆ.

ಲಾಸ್ ಏಂಜಲಿಸ್‌ನಿಂದ ಹಿಡಿದು ಹವಾಯಿ ಮತ್ತು ನ್ಯೂಯಾರ್ಕ್‌ವರೆಗೆ 5,000ಕ್ಕಿಂತಲೂ ಅಧಿಕ ವಸತಿ ಕೋಣೆಗಳನ್ನು ಪಡೆಯುವಲ್ಲಿ ಭಾರತೀಯ-ಅಮೆರಿಕನ್ ಸಮುದಾಯವು ಯಶಸ್ವಿಯಾಗಿದೆ ಹಾಗೂ ಆ ಕೋಣೆಗಳನ್ನು ಭಾರತೀಯ ವಿದ್ಯಾರ್ಥಿಗಳ ವಾಸಕ್ಕಾಗಿ ಉಚಿತವಾಗಿ ನೀಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News