ನ್ಯೂಯಾರ್ಕ್‌ನಲ್ಲಿ ಬೀಗಮುದ್ರೆಯಿಲ್ಲ: ಟ್ರಂಪ್

Update: 2020-03-29 17:40 GMT

ವಾಶಿಂಗ್ಟನ್, ಮಾ. 29: ನ್ಯೂಯಾರ್ಕ್ ಮತ್ತು ಅದರ ನೆರೆ ರಾಜ್ಯಗಳಲ್ಲಿ ಎರಡು ವಾರಗಳ ಕಾಲ ಸಂಪೂರ್ಣ ಬೀಗಮುದ್ರೆ ಹೇರುವುದರಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹಿಂದೆ ಸರಿದಿದ್ದಾರೆ.

‘‘ಕ್ವಾರಂಟೈನ್ (ಪ್ರತ್ಯೇಕ ವಾಸ) ಅಗತ್ಯವಿಲ್ಲ’’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ಅದಕ್ಕೂ ಕೆಲವು ಗಂಟೆಗಳ ಮೊದಲು, ನ್ಯೂಯಾರ್ಕ್ ಮೆಟ್ರೊಪಾಲಿಟನ್ ವಲಯದಲ್ಲಿ ಲಾಕ್‌ಡೌನ್ ಹೇರುವ ಪ್ರಸ್ತಾವವನ್ನು ಟ್ರಂಪ್ ಮುಂದಿಟ್ಟಿದ್ದರು.

2,147 ಸಾವು

ನ್ಯೂಯಾರ್ಕ್ ರಾಜ್ಯವೊಂದರಲ್ಲೇ 53,000ಕ್ಕೂ ಅಧಿಕ ನೂತನ-ಕೊರೋನವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಅಮೆರಿಕದಾದ್ಯಂತ ಒಟ್ಟು 1,22,000ಕ್ಕೂ ಅಧಿಕ ಸೋಂಕು ಪ್ರಕರಣಗಳಿವೆ.

ನ್ಯೂಯಾರ್ಕ್ ನಗರವೊಂದರಲ್ಲೇ ಶನಿವಾರ 155 ಸಾವುಗಳು ಸಂಭವಿಸಿವೆ. ಇದರೊಂದಿಗೆ ನಗರದಲ್ಲಿ ಈವರೆಗೆ ಕೊರೋನವೈರಸ್‌ಗೆ ಬಲಿಯಾದವರ ಸಂಖ್ಯೆ 617ಕ್ಕೆ ಏರಿದೆ.

ಅಮೆರಿಕದಾದ್ಯಂತ ಒಟ್ಟು 2,147 ಮಂದಿ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದ್ದಾರೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದ ಅಂಕಿ-ಅಂಶಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News