ಚೀನಾ: ಕೊರೋನವೈರಸ್ ಕೇಂದ್ರಬಿಂದುವಿನಲ್ಲಿ ವಿಮಾನ ಹಾರಾಟ ಪುನರಾರಂಭ

Update: 2020-03-29 17:45 GMT

ಬೀಜಿಂಗ್, ಮಾ. 29: ಚೀನಾದಲ್ಲಿ ಹೊಸ ಕೊರೋನವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ, ಕೊರೋನವೈರಸ್ ಕೇಂದ್ರಬಿಂದು ಹುಬೈ ರಾಜ್ಯದಲ್ಲಿ ರವಿವಾರ ಆಂತರಿಕ ವಿಮಾನಯಾನವನ್ನು ಪುನರಾರಂಭಿಸಲಾಗಿದೆ.

ಆದರೆ, ರಾಜ್ಯದ ರಾಜಧಾನಿ ವುಹಾನ್‌ಗೆ ವಿಮಾನಗಳು ಸದ್ಯಕ್ಕೆ ಹಾರುವುದಿಲ್ಲ. ಎರಡು ತಿಂಗಳ ಕಾಲ ಕೊರೋನವೈರಸ್ ದಾಳಿಯ ತೀವ್ರ ಹೊಡೆತಕ್ಕೆ ಸಿಲುಕಿದ ವುಹಾನ್‌ಗೆ ಎಪ್ರಿಲ್ 8ರಂದು ಆಂತರಿಕ ವಿಮಾನಯಾನ ಸೇವೆ ಲಭಿಸುತ್ತದೆ.

5.6 ಕೋಟಿ ಜನಸಂಖ್ಯೆಯ ಹುಬೈ ರಾಜ್ಯದಲ್ಲಿ ಮಾರ್ಚ್ 25ರಿಂದಲೇ ನಿರ್ಬಂಧಗಳನ್ನು ಹಂತಹಂತವಾಗಿ ತೆರವುಗೊಳಿಸಲಾಗುತ್ತಾ ಬರಲಾಗಿದೆ. ಕೊರೋನವೈರಸ್ ಸೋಂಕು ಮುಕ್ತರಿಗಾಗಿ ಚಲನವಲನ ನಿರ್ಬಂಧಗಳನ್ನು ಸಡಿಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News