ವಲಸೆ ಹೋಗಬೇಡಿ, ನಿಮ್ಮ ಮನೆ ಬಾಡಿಗೆಯನ್ನು ನಾವು ಪಾವತಿಸುತ್ತೇವೆ : ಕೇಜ್ರಿವಾಲ್

Update: 2020-03-29 18:16 GMT

ಹೊಸದಿಲ್ಲಿ, ಮಾ.29: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಲಸೆ ಕಾರ್ಮಿಕರನ್ನು ತಮ್ಮ ಹಳ್ಳಿಗಳಿಗೆ ಹಿಂದಿರುಗುವ ಬದಲು ನೀವು ನೆಲೆಸಿರುವ ಸ್ಥಳದಲ್ಲೇ ಇರಬೇಕೆಂದು ಮನವಿ ಮಾಡಿದ್ದಾರೆ,

“ಒಂದು ವೇಳೆ ನಿಮಗೆ ರೂಂ ಬಾಡಿಗೆ ಪಾವತಿ ಮಾಡಲು ಸಾಧ್ಯವಾಗದಿದ್ದರೆ ತಮ್ಮ ಮನೆ ಬಾಡಿಗೆಯನ್ನು ಸರಕಾರ ಪಾವತಿಸಲಿದೆ. ಜನರು ಈ ಬಿಕ್ಕಟ್ಟಿನ ಸಮಯದಲ್ಲಿ ತಮ್ಮನ್ನು ಮತ್ತು ತಮ್ಮ ಪ್ರೀತಿಪಾತ್ರರ ಬಗ್ಗೆ ಯೋಚಿಸಬೇಕು ಮತ್ತು ಸೋಂಕು ಹರಡುವುದನ್ನು ತಡೆಗಟ್ಟಲು ಸಹಾಯ ಮಾಡಬೇಕು” ಎಂದರು.

ಲಾಕ್‌ಡೌನ್‌ನಿಂದಾಗಿ ಉದ್ಯೋಗವಿಲ್ಲದೆ ಕೈಯಲ್ಲಿ ಹಣವಿಲ್ಲದಿರುವುದರಿಂದ ಮನೆ ಮಾಲೀಕರು ಹೊರಹಾಕುವ ಭಯವು ವಲಸೆ ಕಾರ್ಮಿಕರನ್ನು ತಾವು ನೆಲೆಸಿರುವ ಜಾಗವನ್ನು ಬಿಡಲು ಕಾರಣವಾಗಿದೆ ಎಂದು ಮುಖ್ಯ ಮಂತ್ರಿ ಹೇಳಿದರು.

ಈ ಸಮಯದಲ್ಲಿ ಕಾರ್ಮಿಕರಿಂದ ಮನೆ ಬಾಡಿಗೆಗೆ ಒತ್ತಾಯಿಸಬಾರದು ಮತ್ತು ಕಾರ್ಮಿಕರನ್ನು ಅಥವಾ ವಿದ್ಯಾರ್ಥಿಗಳನ್ನು ಆವರಣದಿಂದ ಖಾಲಿ ಮಾಡುವಂತೆ ಕೇಳುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News