ಕೇಂದ್ರ ಸರಕಾರದ ಉದ್ಯೋಗಿಗಳಿಗೆ ರೈಲ್ವೆಯಿಂದ ವೈದ್ಯಕೀಯ ಸೌಲಭ್ಯ

Update: 2020-03-29 18:23 GMT

ಹೊಸದಿಲ್ಲಿ, ಮಾ. 29: ಕೋವಿಡ್ -19 ಬಿಕ್ಕಟ್ಟಿನ ಕಾರಣದಿಂದಾಗಿ ಭಾರತದ ರೈಲ್ವೆಯು ತನ್ನ ಆಸ್ಪತ್ರೆ ಮತ್ತು ಡಿಸ್ಪೆನ್ಸರಿಗಳಲ್ಲಿ ಕೇಂದ್ರ ಸರಕಾರದ ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೂ ವೈದ್ಯಕೀಯ ಸೌಲಭ್ಯವನ್ನು ಒದಗಿಸಲಿದೆ.

 ದೇಶಾದ್ಯಂತ ಇರುವ ರೈಲ್ವೆಯ 128 ಆಸ್ಪತ್ರೆ ಮತ್ತು 586 ಡಿಸ್ಪೆನ್ಸರಿಗಳಲ್ಲಿ ವೈದ್ಯಕೀಯ ಸೌಲಭ್ಯ ದೊರೆಯಲಿದೆ ಎಂದು ರೈಲ್ವೆ ಮಂಡಳಿಯು ತಿಳಿಸಿದೆ.

ಇಷ್ಟರ ತನಕ ರೈಲ್ವೆಯ ಉದ್ಯೋಗಿಗಳಿಗೆ ಮತ್ತು ನಿವೃತ್ತ ಉದ್ಯೋಗಿಗಳಿಗೆ ಮಾತ್ರ ರೈಲ್ವೆಯ ಆಸ್ಪತ್ರೆ ಮತ್ತು ಡಿಸ್ಪೆನ್ಸರಿಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಅವಕಾಶ ಇತ್ತು. ಕೇಂದ್ರ ಸರಕಾರದ ಉದ್ಯೋಗಿಗಳು ತಮ್ಮ ಗುರುತು ಪತ್ರವನ್ನು ತೋರಿಸಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News