ಜಗತ್ತಿನಾದ್ಯಂತ 7 ಲಕ್ಷ ಮೀರಿದ ಕೊರೋನ ಸೋಂಕಿತರ ಸಂಖ್ಯೆ

Update: 2020-03-30 17:12 GMT

ಪ್ಯಾರಿಸ್, ಮಾ. 30: ನೋವೆಲ್-ಕೊರೋನವೈರಸ್ ಸಾಂಕ್ರಾಮಿಕ ಚೀನಾದಲ್ಲಿ ಡಿಸೆಂಬರ್‌ನಲ್ಲಿ ಆರಂಭಗೊಂಡಂದಿನಿಂದ ಜಗತ್ತಿನಾದ್ಯಂತ ಈವರೆಗೆ ಕನಿಷ್ಠ 7,15,204 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಅಧಿಕೃತ ಮಾಹಿತಿಗಳನ್ನು ಆಧರಿಸಿ ಎಎಫ್‌ಪಿ ಸೋಮವಾರ ವರದಿ ಮಾಡಿದೆ.

ಇದೇ ಅವಧಿಯಲ್ಲಿ 183 ದೇಶಗಳಲ್ಲಿ 33,568 ಸಾವುಗಳು ಸಂಭವಿಸಿವೆ. ಮಾರಕ ಸಾಂಕ್ರಾಮಿಕ ಆರಂಭಗೊಂಡಿದ್ದ ಚೀನಾದ ವುಹಾನ್ ನಗರದಲ್ಲಿ, ಎರಡು ತಿಂಗಳಿಗೂ ಅಧಿಕ ಅವಧಿಯ ಸಂಪೂರ್ಣ ಬೀಗಮುದ್ರೆಯ ಬಳಿಕ ದೈನಂದಿನ ಚಟುವಟಿಕೆಗಳು ಆಂಶಿಕವಾಗಿ ಆರಂಭಗೊಂಡಿವೆ.

ಚೀನಾದಲ್ಲಿ ರೋಗಕ್ಕೆ ಈವರೆಗೆ 3,304 ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News