ಇಟಲಿ: ಒಂದು ದಿನದಲ್ಲಿ 756 ಸಾವು : ಒಟ್ಟು ಸಾವಿನ ಸಂಖ್ಯೆ 10,779

Update: 2020-03-30 17:13 GMT

ರೋಮ್, ಮಾ. 30: ಇಟಲಿಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 756 ಕೊರೋನವೈರಸ್ ಸಾವುಗಳು ಸಂಭವಿಸಿವೆ ಎಂದು ದೇಶದ ನಾಗರಿಕ ರಕ್ಷಣಾ ಸಂಸ್ಥೆ ರವಿವಾರ ತಿಳಿಸಿದೆ.

ಇದು ದೈನಂದಿನ ಸಾವಿನ ದರದಲ್ಲಿ ಸತತ ಎರಡನೆ ದಿನದ ಇಳಿಕೆಯಾಗಿದೆ.

ಇದರೊಂದಿಗೆ ದೇಶದಲ್ಲಿ ಈ ರೋಗಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 10,779ಕ್ಕೆ ಏರಿದೆ. ಕೊರೋನವೈರಸ್‌ನಿಂದಾಗಿ ಸತ್ತವರ ಸಂಖ್ಯೆಯಲ್ಲಿ ಇಟಲಿ ಮೊದಲನೇ ಸ್ಥಾನದಲ್ಲಿದೆ. ಇಟಲಿಯ ಒಂದು ದಿನದ ಅತಿ ಹೆಚ್ಚು ಸಾವು 919 ಶುಕ್ರವಾರ ವರದಿಯಾಗಿತ್ತು.

ದೇಶದಲ್ಲಿ ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ ಈಗ 97,689ಕ್ಕೆ ಏರಿದೆ. ಅದೇ ವೇಳೆ, 13,080 ಮಂದಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News