ಮಲೇರಿಯಾ ನಿರೋಧಕ ಔಷಧ ಸೇವಿಸಿ ವೈದ್ಯ ಮೃತ್ಯು

Update: 2020-03-30 17:38 GMT

ಗುವಾಹಟಿ, ಮಾ.30: ಮಲೇರಿಯಾ ನಿರೋಧಕ ಔಷಧ ಸೇವಿಸಿದ ವೈದ್ಯರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಕೊರೋನ ವೈರಸ್ ಸೋಕು ಹರಡುವುದನ್ನು ತಡೆಯಲು ಮಲೇರಿಯಾ ನಿರೋಧಕ ಔಷಧ ಹೈಡ್ರಾಕ್ಸಿಕ್ಲೋರೊಕ್ವಿನ್ ಸಂಭಾವ್ಯ ಔಷಧವೆಂದು ಹೇಳಲಾಗುತ್ತಿದೆ. ಅಮೆರಿಕದಂತಹ ದೇಶ ಜಾಗತಿಕವಾಗಿ ಈ ಔಷಕ್ಕೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅಮೆರಿಕ ಈ ಔಷಧದ ರಫ್ತಿಗೆ ನಿಷೇಧ ಹೇರಿದೆ.

ಹಲವು ವೈದ್ಯರು ಕೊರೋನ ವೈರಸ್ ಸೋಂಕು ತಡೆಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಗುವಾಹಟಿಯ ಪ್ರತಿಕ್ಷಾ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿರುವ ಉತ್ಪಾಲಿಜಿತ್ ಬರ್ಮನ್ ಅವರು ಇದೇ ಔಷಧವನ್ನು ತೆಗದೆಕೊಂಡಿದ್ದರು ಎಂದು ಪ್ರತೀಕ್ಷಾ ಆಸ್ಪತ್ರೆಯ ಮೆಡಿಕಲ್ ಅಧೀಕ್ಷಕರಾದ ನಿರ್ಮಲ್ ಕುಮಾರ್ ಹಝಾರಿಕಾ ತಿಳಿಸಿದ್ದಾರೆ.

ಸಾಮಾನ್ಯವಾಗಿ ಎರಡು ಡೋಸ್ ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧ ತೆಗೆದುಕೊಳ್ಳಲಾಗುತ್ತದೆ. ಆದರೆ ಬರ್ಮನ್ ಎಷ್ಟು ಡೋಸ್ ಔಷಧ ತೆಗೆದುಕೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಹಝಾರಿಕಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News