ಕೋವಿಡ್ 19: ದಿಲ್ಲಿಯಲ್ಲಿ ನಡೆದಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 7 ಮಂದಿ ಸಾವು

Update: 2020-03-31 13:08 GMT

ಹೊಸದಿಲ್ಲಿ, ಮಾ.31: ಭಾರತದ ಅತಿದೊಡ್ಡ ಕೊರೋನ ವೈರಸ್ ಸೋಂಕಿತ  (ಕೋವಿಡ್ -19) ಹಾಟ್ ಸ್ಪಾಟ್‌ ಗಳಲ್ಲಿ ಒಂದಾಗಿ ಇದೀಗ ಗುರುತಿಸಿಕೊಂಡಿರುವ ದಿಲ್ಲಿ ನಿಝಾಮುದ್ದೀನ್ ಪ್ರದೇಶದಲ್ಲಿರುವ ಧಾರ್ಮಿಕ ಕೇಂದ್ರ ಕಚೇರಿಯನ್ನು ಮಂಗಳವಾರ ಮುಚ್ಚಲಾಗಿದ್ದು, 800  ಅಲ್ಲಿನ ಜನರನ್ನು ಬಸ್‌ಗಳಲ್ಲಿ ಸ್ಥಳಾಂತರಿಸಲಾಗಿದೆ.

ಮಾರ್ಚ್ 15ರಿಂದ 17ರ ತನಕ  ಇಲ್ಲಿ ನಡೆದ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವು ಮಂದಿ ಕೊರೋನ ಸೋಂಕಿಗೆ ಒಳಗಾಗಿದ್ದಾರೆ

ದಿಲ್ಲಿಯ ಲೋಕ ನಾಯಕ್ ಆಸ್ಪತ್ರೆಗೆ  ಇಲ್ಲಿಂದ   ದಾಖಲಿಸಿದ  102 ಜನರಲ್ಲಿ 24  ಮಂದಿಗೆ  ಕೊರೋನ ವೈರಸ್ ಸೋಂಕು ತಗಲಿರುವುದು  ಪತ್ತೆಯಾಗಿದೆ.  ಇನ್ನೂ ಇತರ 200  ಮಂದಿಯನ್ನು ಇತರ ಎರಡು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ  ಎಂದು ತಿಳಿದು ಬಂದಿದೆ.

 ತಬ್ಲೀಗ್ -ಎ-ಜಮಾಅತ್ ಕೂಟದಲ್ಲಿ ಪಾಲ್ಗೊಂಡಿದ್ದ ಇನ್ನೂ 11 ಮಂದಿ ಆಂಧ್ರಪ್ರದೇಶದಲ್ಲಿ ಸೋಂಕಿಗೆ ಒಳಗಾಗಿದ್ದಾರೆ ಎಂದು ರಾಜ್ಯ ಸರ್ಕಾರ ಮಂಗಳವಾರ ತಿಳಿಸಿದೆ, ಒಬ್ಬ ರೋಗಿಯು ಸಭೆಯಲ್ಲಿ ಭಾಗವಹಿಸಿದ ವ್ಯಕ್ತಿಯ ನಿಕಟ ಸಂಪರ್ಕದಲ್ಲಿದ್ದರು.

" ಇದೊಂದು  ಘೋರ ಅಪರಾಧ '' ಎಂದು ದಿಲ್ಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ. ದಿಲ್ಲಿ ಸರ್ಕಾರವು ಸಂಘಟನೆಯ ದಿವ್ಯ ನಿರ್ಲಕ್ಷ್ಯದಿಂದ ಈ ಅನಾಹುತ ಸಂಭವಿಸಿದೆ.  ಧಾರ್ಮಿಕ ಕೇಂದ್ರದ   ಗುರುಗಳ ವಿರುದ್ಧ ಎಫ್ಐಆರ್ ದಾಖಲಿಸಲು  ಚಿಂತನೆ ನಡೆಸಲಾಗಿದೆ  ಎಂದು ಹೇಳಿದರು,  ಆದರೆ ಅವರು ಯಾವುದೇ ಲಾಕ್ ಡೌನ್  ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಲ್ಲಿ ನಡೆದ ಕಾರ್ಯಕ್ರಮದಲ್ಲಿ  ಸಂಪರ್ಕ ಹೊಂದಿದ್ದ ದೇಶದ ವಿವಿಧ ರಾಜ್ಯಗಳ ಒಂಬತ್ತು  ಮಂದಿ  ಸಾವನ್ನಪ್ಪಿದ್ದಾರೆ - ತೆಲಂಗಾಣದಲ್ಲಿ ಆರು, ಶ್ರೀನಗರದಲ್ಲಿ ಒಬ್ಬರು, ಮುಂಬೈನಲ್ಲಿ ಒಬ್ಬರು ಮತ್ತು ಕರ್ನಾಟಕದ ತುಮಕೂರಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ

ತೆಲಂಗಾಣದ ಆರು ಜನರಲ್ಲಿ ಇಬ್ಬರು ಗಾಂಧಿ ಆಸ್ಪತ್ರೆಯಲ್ಲಿ, ಅಪೊಲೊ ಆಸ್ಪತ್ರೆ, ಜಾಗತಿಕ ಆಸ್ಪತ್ರೆ, ನಿಜಾಮಾಬಾದ್ ಮತ್ತು ಗಡ್ವಾಲ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ  ಪಾಲ್ಗೊಂಡ ಓರ್ವರು ಕಳೆದ ವಾರ ಶ್ರೀನಗರದಲ್ಲಿ ಮೃತಪಟ್ಟಿದ್ದರು. ಅವರು ಉತ್ತರ ಪ್ರದೇಶದ ದಿಯೋಬಂದ್ ಸೆಮಿನರಿಗೆ ಭೇಟಿ ನೀಡಿದ್ದರು ಮತ್ತು ಕಾಶ್ಮೀರಕ್ಕೆ ಹಿಂದಿರುಗಿದ ನಂತರ ಅನೇಕ ಸಭೆಗಳಲ್ಲಿ ಪಾಲ್ಗೊಂಡಿದ್ದರು.

ಮಾರ್ಚ್ 22 ರಂದು ಕೋವಿಡ್ -19 ರ ಕಾರಣದಿಂದಾಗಿ ಮುಂಬೈನಲ್ಲಿ ನಿಧನರಾದ 65 ವರ್ಷದ ಫಿಲಿಪ್ಪೆನ್ಸ್  ಪ್ರಜೆಯೊಬ್ಬರು ಸೇರಿದಂತೆ 10 ಮಂದಿ  ಸಭೆಗೆ ಹಾಜರಾಗಿದ್ದರು, ಮತ್ತು ಇವರರಲ್ಲಿ  ಮೂವರರಲ್ಲಿ ಪೊಸಿಟಿವ್ ಕಂಡು ಬಂದಿದೆ.. ಈ ಗುಂಪು ನವೀ ಮುಂಬಯಿಯ ಮಸೀದಿಯೊಂದರಲ್ಲಿ ಉಳಿದುಕೊಂಡಿತ್ತು ಮತ್ತು ಆ ಮಸೀದಿಯ ಮೌಲಾನಾ ಅವರ ಮಗ, ಮೊಮ್ಮಗ ಸೋಂಕಿಗೆ ಒಳಗಾಗಿದ್ದಾರೆ.  ಧರ್ಮಗುರುವಿನೊಂದಿಗೆ  ಸಂಪರ್ಕಕ್ಕೆ ಬಂದ ಅನೇಕ ಜನರನ್ನು ನಿರ್ಬಂಧಿಸಲಾಗಿದೆ.

 ರೈಲಿನಲ್ಲಿ ದಿಲ್ಲಿಗೆ  ಪ್ರಯಾಣಿಸಿದ 60 ವರ್ಷದ ಕರ್ನಾಟಕದ ತುಮಕೂರಿನ  ವ್ಯಕ್ತಿ  ಮಾರ್ಚ್ 27 ರಂದು ಆಸ್ಪತ್ರೆಯಲ್ಲಿ ನಿಧನರಾದರು

ನಿಝಾಮುದ್ದೀನ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 300 ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಭಾಗವಹಿಸಿದ್ದರು, ಇದರಲ್ಲಿ ಇಂಡೋನೇಷ್ಯಾದಿಂದ 72, ಥಾಯ್ಲೆಂಡ್ ನಿಂದ  71, ನೇಪಾಳದಿಂದ 19, ಮಲೇಷ್ಯಾದ  20, ಮೈನಾಮಾರ್‌ ನ  33, ಶ್ರೀಲಂಕಾದ 34, ಬಾಂಗ್ಲಾದೇಶ  19 ಮತ್ತು 28 ಕಿರ್ಗಿಸ್ತಾನ್  ದ ಪ್ರಜೆಗಳು ಸೇರಿದ್ದಾರೆ.

ಅಂಡಮಾನ್, ತೆಲಂಗಾಣ, ತಮಿಳುನಾಡು ಮತ್ತು ಕಾಶ್ಮೀರ ಪ್ರದೇಶಗಳ ಅಧಿಕಾರಿಗಳು ರೋಗಿಗಳನ್ನು   ಪರೀಕ್ಷಿಸಿ  ರೋಗಿಗಳ ಪ್ರಯಾಣದ ಇತಿಹಾಸವನ್ನು ಪತ್ತೆಹಚ್ಚಲು ಪ್ರಾರಂಭಿಸಿದಾಗ  ನಿಝಾಮುದ್ದೀನ್  ಘಟನೆ  ಬೆಳಕಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News