ಇಟಲಿ: ಇನ್ನೂ 812 ಸಾವು

Update: 2020-03-31 17:22 GMT

ರೋಮ್ (ಇಟಲಿ), ಮಾ. 31: ಇಟಲಿಯಲ್ಲಿ ಕೊರೋನವೈರಸ್‌ನಿಂದಾಗಿ ಸೋಮವಾರ ಹೊಸದಾಗಿ 812 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಆ ದೇಶದಲ್ಲಿ ಈವರೆಗೆ ಮಾರಕ ಸೋಂಕಿಗೆ ಬಲಿಯಾದವರ ಸಂಖ್ಯೆ 11,591ಕ್ಕೆ ಏರಿದೆ.

ಸೋಮವಾರ 4,050 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ.

ಮೃತರ ಗೌರವಾರ್ಥ ನಿಮಿಷದ ಮೌನಾಚರಣೆ

ಕೊರೋನವೈರಸ್‌ಗೆ ಬಲಿಯಾದವರ ಗೌರವಾರ್ಥ ಇಟಲಿಯಲ್ಲಿ ಮಂಗಳವಾರ ಒಂದು ನಿಮಿಷದ ವೌನಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇಶಾದ್ಯಂತ ರಾಷ್ಟ್ರಧ್ವಜಗಳು ಅರ್ಧ ಮಟ್ಟದಲ್ಲಿ ಹಾರಾಡಿದವು.

ಕೊರೋನವೈರಸ್‌ನಿಂದಾಗಿ ಜಗತ್ತಿನಲ್ಲಿ ಸಂಭವಿಸಿದ ಸಾವುಗಳ ಪೈಕಿ ಸುಮಾರು ಮೂರನೇ ಒಂದು ಸುಮಾರು 6 ಕೋಟಿ ಜನಸಂಖ್ಯೆಯ ಇಟಲಿಯೊಂದರಲ್ಲೇ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News