ಬ್ರಿಟನ್: ದಾಖಲೆಯ 381 ಮಂದಿ ಸಾವು

Update: 2020-04-01 17:43 GMT

ಲಂಡನ್, ಎ. 1: ಬ್ರಿಟನ್‌ನಲ್ಲಿ ಮಂಗಳವಾರ ದಾಖಲೆಯ 381 ಕೊರೋನವೈರಸ್ ಸೋಂಕಿತರು ಸಾವನ್ನಪ್ಪಿದ್ದಾರೆ. ಇದು ದೇಶದಲ್ಲಿ ಹಿಂದಿನ 24 ಗಂಟೆಗಳ ಅವಧಿಯಲ್ಲಿ ವರದಿಯಾದ ಸಾವಿನ ಸಂಖ್ಯೆಯ ದುಪ್ಪಟ್ಟಿಗಿಂತಲೂ ಅಧಿಕವಾಗಿದೆ.

ಇದರೊಂದಿಗೆ ಈ ಮಾರಕ ಸಾಂಕ್ರಾಮಿಕಕ್ಕೆ ಈವರೆಗೆ ಬ್ರಿಟನ್‌ನಲ್ಲಿ ಬಲಿಯಾದವರ ಒಟ್ಟು ಸಂಖ್ಯೆ 1,789ಕ್ಕೆ ಏರಿದೆ ಎಂದು ಬ್ರಿಟನ್‌ನ ಆರೋಗ್ಯ ಸಚಿವಾಲಯ ತನ್ನ ಟ್ವಿಟರ್ ಪುಟದಲ್ಲಿ ತಿಳಿಸಿದೆ.

ಮೃತರು 19ರಿಂದ 98 ವರ್ಷದವರು. ದೇಶದ ಹಿಂದಿನ ಅತಿ ಹೆಚ್ಚು ಸಾವಿನ ಸಂಖ್ಯೆ 260 ಶನಿವಾರ ವರದಿಯಾಗಿತ್ತು.

ದೇಶದಲ್ಲಿ ಹೊಸದಾಗಿ 3,009 ಮಂದಿ ಹೊಸದಾಗಿ ಸೋಂಕು ಪೀಡಿತರಾಗಿದ್ದು, ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 25,150ಕ್ಕೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News